ದೇಶ

ರಾಹುಲ್'ಗೆ ಒಳ್ಳೆಯ ಹೃದಯವಿದೆ ಆದರೆ, ತಮ್ಮ ಕಚೇರಿಯಲ್ಲಿ ಕನಿಷ್ಟ 15 ಗಂಟೆಯಾದರೂ ಕಾಲ ಕಳೆಯಬೇಕು: ಶಿವಸೇನೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಒಳ್ಳೆಯ ಹೃದಯವಿದೆ. ಆದರೆ, ತಮ್ಮ ಕಚೇರಿಯಲ್ಲಿ ಕನಿಷ್ಠ 15 ಗಂಟೆಯಾದರೂ ಕಳೆಯಬೇಕು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಹೇಳಿದ್ದಾರೆ.

ರಾಹುಲ್'ಗೆ ಒಳ್ಳೆಯ ಹೃದಯವಿದೆ ಆದರೆ, ತಮ್ಮ ಕಚೇರಿಯಲ್ಲಿ ಕನಿಷ್ಟ 15 ಗಂಟೆಯಾದರೂ ಕಾಲ ಕಳೆಯಬೇಕು: ಶಿವಸೇನೆ
ಸಂಜಯ್ ರಾವತ್
Published On :

ಪುಣೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಒಳ್ಳೆಯ ಹೃದಯವಿದೆ. ಆದರೆ, ತಮ್ಮ ಕಚೇರಿಯಲ್ಲಿ ಕನಿಷ್ಠ 15 ಗಂಟೆಯಾದರೂ ಕಳೆಯಬೇಕು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಹೇಳಿದ್ದಾರೆ. 

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ರಾಜಕರೀಯ ಪ್ರಮುಖ ವ್ಯಕ್ತಿಗಳ ಗುಣಗಳ ಕುರಿತ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಮೋದಿ ಅತ್ಯಂತ ಶ್ರಮದಾಯಕ ವ್ಯಕ್ತಿ ಎಂದು ಹೇಳಿದ್ದಾರೆ. ಮೋದಿಯವರು ಪ್ರಧಾನಮಂತ್ರಿಗಳಾಗಿದ್ದು, ಅವರಿಗೆ ಸಲಹೆ ನೀಡುವ ಹಕ್ಕು ನನಗಿಲ್ಲ. ಆದರೆ, ಓರ್ವ ಪತ್ರಕರ್ತನಾಗಿ ಹೇಳುವುದಾದರೆ, ಸಹೋದ್ಯೋಗಿಗಳ ನಡುವೆ ಏನಾಗುತ್ತಿದೆ ಎಂಬುದನ್ನು ಮೋದಿಯವರು ಪರಿಶೀಲಿಸಬೇಕೆಂದು ತಿಳಿಸಿದ್ದಾರೆ. 

ಇದೇ ವೇಳೆ ಅಮಿತ್ ಶಾ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಮಿತ್ ಶಾ ಕಟ್ಟಾ ರಾಷ್ಟ್ರೀಯವಾದಿ. 370ವಿಧಿ ರದ್ಧತಿಯಿಂದಲೇ ಅವರ ನಿರ್ಧಾರದ ಕುರಿತು ತಿಳಿಯಬಹುದಾಗಿದೆ. ಆದರೆ, ಕೆಲ ವಿಚಾರಗಳಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ ಮತ್ತು ವಿರೋಧ ಪಕ್ಷಗಳ ದೃಷ್ಟಿಯನ್ನು ಅರ್ಥ ಮಾಡಿಕೊಳ್ಲಬೇಕಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.