ಶ್ರೀನಗರ: ಗಣರಾಜ್ಯೋತ್ಸವ ವೇಳೆ ದಾಳಿಗೆ ಸ್ಕೆಚ್: ಐವರು ಜೆಇಎಂ ಸಂಚುಕೋರರ ಬಂಧನ
ಗಣರಾಜೋತ್ಸವಕ್ಕೆ ಕೆಲ ದಿನಗಳು ಬಾಕಿ ಇರುವಂತೆಯೇ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಸಂಚುಕೋರರನ್ನು ಬಂಧಿಸಲಾಗಿದೆ.

ಶ್ರೀನಗರ: ಗಣರಾಜೋತ್ಸವಕ್ಕೆ ಕೆಲ ದಿನಗಳು ಬಾಕಿ ಇರುವಂತೆಯೇ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ
ಶ್ರೀನಗರದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಸಂಚುಕೋರರನ್ನು ಬಂಧಿಸಲಾಗಿದೆ.
ಗಣರಾಜ್ಯೋತ್ಸವ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಹಜಾರತ್ ಬಾಲ್ ಪ್ರದೇಶದಲ್ಲಿ ಎರಡು ಗ್ರೆನೇಡ್ ಸ್ಫೋಟವಾಗಿದ್ದು, ಜೈಷ್ -ಇ- ಮೊಹಮ್ಮದ್ ಸಂಘಟನೆಯ ಸಂಚನ್ನು ಬೇಧಿಸುವಲ್ಲಿ ಶ್ರೀನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಸಂಚುಕೋರರನ್ನು ಸದರ್ಬಲ್ ಹಜರತ್ಬಾಲ್ನ ಐಜಾಜ್ ಅಹ್ಮದ್ ಶೇಖ್, ಹಜಾರತ್ ಬಾಲ್ ಅಸಾರ್ ಕಾಲೋನಿಯ ಉಮರ್ ಹಮೀದ್ ಶೇಖ್, ಇಮ್ತಿಯಾಜ್ ಅಹ್ಮದ್, ಎಲ್ಲಹಿಬಾಗ್ ಸೌರಾದ ಶಹೀಲ್ ಫಾರೂಖ್ ಗೊಜ್ರಿ ಮತ್ತು ಸದರ್ ಬಲ್ ಹಜಾರತ್ ಬಾಲ್ ನ ನಸೀರ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ.
ಸಂಚುಕೋರರಿಂದ 143 ಗೆಲಾಟಿನ್ ಕಡ್ಡಿಗಳು, 7 ದ್ವಿತೀಯ ಸ್ಫೋಟಕಗಳು, 01 ಸೈಲೆನ್ಸರ್ಸ್, 42 ಡಿಟೊನೆಟರ್ಸ್, ವಾಕಿ ಟಾಕಿ, ಸಿಡಿ ಡ್ರೈವ್, ಬ್ಯಾಟರಿಗಳು, ಬ್ಯಾಟರಿ ಚಾರ್ಜರ್, ಕಾಯಿಲ್, ಪೌಚ್, ಅಮೆರಿಕಾದ ಪ್ರವಾಸಿಗರು ಬಳಸುವ ರಾಕ್ ಸಾಕ್ ಬ್ಯಾಗ್, ನ್ಯೂಟ್ರಿಕ್ ಆಸಿಡ್ ಬಾಟಲ್ ಸೇರಿದಂತೆ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


