ದೇಶ

2022 ರ ವೇಳೆಗೆ ನವ ಭಾರತ ಕನಸನ್ನು ನನಸು ಮಾಡಲು ಭಾರತೀಯರು ದೃಢ ಸಂಕಲ್ಪ ಹೊಂದಿದ್ದಾರೆ: ಪ್ರಧಾನಿ ಮೋದಿ 

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಏರ್ಪಡಿಸಿರುವ 'ಇಂಡಿಯಾ ಅಟ್ 75: ವಿಷನ್ 2022’ ಎಂಬ ವಿಷಯದ ಕುರಿತು ಯೋಜನೆ ಮತ್ತು ಆಲೋಚನೆಗಳನ್ನು ಮಂಡಿಸುವ ಥಿಂಕ್ ಎಡು ಸಮ್ಮೇಳನ ಅತ್ಯಂತ ಪ್ರಸ್ತುತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

2022 ರ ವೇಳೆಗೆ ನವ ಭಾರತ ಕನಸನ್ನು ನನಸು ಮಾಡಲು ಭಾರತೀಯರು ದೃಢ ಸಂಕಲ್ಪ ಹೊಂದಿದ್ದಾರೆ: ಪ್ರಧಾನಿ ಮೋದಿ 
ಪಿಎಂ ನರೇಂದ್ರ ಮೋದಿ
Published On :

ಚೆನ್ನೈ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಏರ್ಪಡಿಸಿರುವ 'ಇಂಡಿಯಾ ಅಟ್ 75: ವಿಷನ್ 2022’ ಎಂಬ ವಿಷಯದ ಕುರಿತು ಯೋಜನೆ ಮತ್ತು ಆಲೋಚನೆಗಳನ್ನು ಮಂಡಿಸುವ ಥಿಂಕ್ ಎಡು ಸಮ್ಮೇಳನ ಅತ್ಯಂತ ಪ್ರಸ್ತುತವಾಗಿದೆ ಎಂದು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳು ಆಲೋಚನೆಯನ್ನು ಸಮೃದ್ಧಗೊಳಿಸುವ ಮತ್ತು ಚಿಂತನೆಗೆ ಹಚ್ಚುವ ಮತ್ತು ವಲಯದ ಬೆಳವಣಿಗೆಯ ಪಥಕ್ಕೆ ಮಾರ್ಗಸೂಚಿಯನ್ನು ಒದಗಿಸುವುದಾಗಿದೆ ಎಂದು ಹೇಳಿದ್ದಾರೆ.


ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರಿಗೆ ಕಳುಹಿಸಿರುವ ಸಂದೇಶದಲ್ಲಿ, ಶಿಕ್ಷಣವನ್ನು ಮೌಲ್ಯಮಾಪನ ಮಾಡುವ ಭಾರತದ ಸಮಯರಹಿತ ಸಂಪ್ರದಾಯವನ್ನು ಪ್ರತಿಬಿಂಬಿಸಿದ ಭಾರತದ ಶಿಕ್ಷಣ ಗುರು-ಶಿಷ್ಯ ಪರಂಪರೆಯಿಂದ ಹೆಣೆಯಲ್ಪಟ್ಟಿದ್ದು, ಶಿಕ್ಷಣ ಮತ್ತು ಕಲಿಕೆಯನ್ನು ನೀಡುವ ವಾತಾವರಣವು ಪ್ರಾಚೀನ ಕಾಲದಿಂದಲೂ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ" ಎಂದು ಹೇಳಿದ್ದಾರೆ.

Story image


ತಮ್ಮ ಸರ್ಕಾರ ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡುತ್ತಿದ್ದು, ಶಿಕ್ಷಣವು ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಯ ಆಧಾರವಾಗಿದೆ. ಶಿಕ್ಷಣದ ಉದ್ದೇಶವ ಮಾಹಿತಿ ಅಥವಾ ಸೂತ್ರಗಳ ವರ್ಗಾವಣೆಗೆ ಸೀಮಿತವಾಗಿರಬಾರದು, ಯುವ ಮನಸ್ಸುಗಳನ್ನು ಸೃಜನಾತ್ಮಕವಾಗಿ ಯೋಚಿಸಲು ಪ್ರೇರೇಪಿಸುವುದು, ಹೊಸತನವನ್ನು ಕಲ್ಪಿಸುವುದು, ತಮ್ಮ ಪರಿಧಿಯನ್ನು ವಿಸ್ತರಿಸುವುದು ಮತ್ತು ಮೌಲ್ಯಗಳೊಂದಿಗೆ ಹೊಸ ವಿಷಯಗಳನ್ನು ಕಲಿಯುವುದಾಗಿರಬೇಕು "ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.