ಕಹಿ ಘಟನೆಗಳ ಮರೆತು, ಕ್ಯಾಂಪಸ್ ಗೆ ವಾಪಸ್ ಆಗಿ: ವಿದ್ಯಾರ್ಥಿಗಳಿಗೆ ಜೆಎನ್ ಯು ವಿಸಿ ಮನವಿ
ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಕಹಿ ಘಟನೆ.. ಅದನ್ನು ಮರೆತು ವಿದ್ಯಾರ್ಥಿಗಳು ಮತ್ತೆ ವಿಶ್ವ ವಿದ್ಯಾಲಯಕ್ಕೆ ವಾಪಸ್ ಆಗಬೇಕು ಎಂದು ವಿವಿಯ ವೈಸ್ ಚಾನ್ಸಿಲರ್ ಎಂ ಜಗದೀಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಕಹಿ ಘಟನೆ.. ಅದನ್ನು ಮರೆತು ವಿದ್ಯಾರ್ಥಿಗಳು ಮತ್ತೆ ವಿಶ್ವ ವಿದ್ಯಾಲಯಕ್ಕೆ ವಾಪಸ್ ಆಗಬೇಕು ಎಂದು ವಿವಿಯ ವೈಸ್ ಚಾನ್ಸಿಲರ್ ಎಂ ಜಗದೀಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಇತ್ತ ವಿದ್ಯಾರ್ಥಿಗಳ ವಿರೋಧ ಮತ್ತು ಫ್ಯಾಕಲ್ಟಿ ಸದಸ್ಯರ (ಅಧ್ಯಾಪಕರು) ತೀವ್ರ ವಿರೋಧ ಎದುರಿಸುತ್ತಿರುವ ಜೆಎನ್ ಯು ಉಪ ಕುಲಪತಿ ಎಂ ಜಗದೀಶ್ ಕುಮಾರ್ ಅವರು, ಕ್ಯಾಂಪಸ್ ಗೆ ವಾಪಸ್ ಆಗುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಜಗದೀಶ್ ಕುಮಾರ್ ಅವರು, 'ಕ್ಯಾಂಪಸ್ ನಲ್ಲಿನ ಹಿಂಸಾಚಾರದಿಂದಾಗಿ ನಮಗೆ ಅತೀವ ನೋವಾಗಿದೆ. ಗಾಯಗೊಂಡ ವಿದ್ಯಾರ್ಥಿಗಳು ಶೀಘ್ರ ಚೇತರಿಕೆ ಕಾಣಲಿ. ಕ್ಯಾಂಪಸ್ ಅವರಣದಲ್ಲಿ ಹಿಂಸಾಚಾರವಾಗಿದ್ದು ದುರದೃಷ್ಟಕರ. ವಿವಿ ಎಂದಿಗೂ ವಿದ್ಯಾರ್ಥಿಗಳಿಗೆ ಸುರಕ್ಷಿತ ಪ್ರದೇಶವಾಗಿತ್ತು. ಮುಂದೆಯೂ ಕೂಡ ಇರಲಿದೆ. ಈ ವಿಶ್ವಾಸವನ್ನು ನಾನು ವಿದ್ಯಾರ್ಥಿಗಳಿಗೆ ನೀಡುತ್ತೇನೆ. ಹಳೆಯ ಕಹಿ ಘಟನೆಗಳನ್ನು ಮರೆತು ವಿದ್ಯಾರ್ಥಿಗಳು ಕ್ಯಾಂಪಸ್ ಗೆ ವಾಪಸ್ ಆಗಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಭಾನುವಾರ ಸಂಜೆ ವಿವಿ ಆವರಣಕ್ಕೆ ನುಗ್ಗಿದ ಮುಸುಕುಧಾರಿ ದುಷ್ಕರ್ಮಿಗಳು ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಏಕಾಏಕಿ ದಾಳಿ ಮಾಡಿದ್ದರು. ಈ ವೇಳೆ ಜೆಎನ್ಎಸ್ ಯುಐ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ದಾಳಿಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
Related Article
ಜೆಎನ್ ಯು ಕ್ಯಾಂಪಸ್ ದೇಶ ವಿರೋಧಿ ಚಟುವಟಿಕೆಗಳ ಕೇಂದ್ರ: ಹಿಂದೂ ರಕ್ಷಾ ದಳ
'ತುಕ್ಡೆ ತುಕ್ಡೆ ಗ್ಯಾಂಗ್' ಗಳನ್ನು ನಾವು ಎಂದೂ ನೋಡಿರಲಿಲ್ಲ: ಜೈಶಂಕರ್
ಜೆಎನ್ ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶೆ ಘೋಷ್ ವಿರುದ್ಧ ಎಫ್ಐಆರ್ ದಾಖಲಿಸಿದ ದೆಹಲಿ ಪೊಲೀಸರು
ಜೆಎನ್‌ಯುನಲ್ಲಿ ರಾಜಕೀಯ ಮಾಡಬಾರದು: ಸ್ಮೃತಿ ಇರಾನಿ
ಜೆಎನ್'ಯು ಹಿಂಸಾಚಾರ: ಬೀದಿಗಿಳಿದು ವಿದ್ಯಾರ್ಥಿಗಳ ಆಕ್ರೋಶ, ಮಹತ್ವದ ಸುಳಿವು ಸಂಗ್ರಹಿಸಿದ ಪೊಲೀಸರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


