ಗುಜರಾತ್ ಕರಾವಳಿಯಲ್ಲಿ 5 ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಬಂಧನ: 35 ಕೆಜಿ ಹೆರಾಯಿನ್ ವಶ
ಗುಜರಾತ್ ಕಛ್ ಜಿಲ್ಲೆಯ ಜಕಾವು ಕರಾವಳಿಯ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಮಾದಕ ವಸ್ತು ಕಳ್ಳ ಸಾಗಾಣಿಕೆ ನಡೆಸುತ್ತಿದ್ದಪಾಕಿಸ್ತಾನ ದೋಣಿಯೊಯನ್ನು ಮುಟ್ಟುಗೋಲುಹಾಕಿಕೊಂಡಿರುವ ಭಯೋತ್ಪಾದಕ ನಿಗ್ರಹ ದಳ- ಎಟಿಎಸ್ ಪೊಲೀಸರು ಸುಮಾರು ೧೭೫ ಕೋಟಿ ರೂ ಮೌಲ್ಯದ ೩೫ ಕೆಜಿ ಹೆರಾಯಿನ್ ವಶಪಡಿಸಿಕೊಂಡು, ಐವರು ಪಾಕಿಸ್ತಾನಿ ನಾಗರೀಕರನ್ನು ಬಂಧಿಸಿದ್ದಾರೆ

ಅಹಮದಾಬಾದ್/ ಭುಜ್: ಗುಜರಾತ್ ಕಛ್ ಜಿಲ್ಲೆಯ ಜಕಾವು ಕರಾವಳಿಯ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಮಾದಕ ವಸ್ತು ಕಳ್ಳ ಸಾಗಾಣಿಕೆ ನಡೆಸುತ್ತಿದ್ದಪಾಕಿಸ್ತಾನ ದೋಣಿಯೊಯನ್ನು ಮುಟ್ಟುಗೋಲುಹಾಕಿಕೊಂಡಿರುವ ಭಯೋತ್ಪಾದಕ ನಿಗ್ರಹ ದಳ- ಎಟಿಎಸ್ ಪೊಲೀಸರು ಸುಮಾರು ೧೭೫ ಕೋಟಿ ರೂ ಮೌಲ್ಯದ ೩೫ ಕೆಜಿ ಹೆರಾಯಿನ್ ವಶಪಡಿಸಿಕೊಂಡು, ಐವರು ಪಾಕಿಸ್ತಾನಿ ನಾಗರೀಕರನ್ನು ಬಂಧಿಸಿದ್ದಾರೆ
ಗುಜರಾತ್ ಕರಾವಳಿಯ ಮೂಲಕ ಪಾಕಿಸ್ತಾನಿಯರು ಮಾದಕ ವಸ್ತು ಕಳ್ಳಸಾಗಾಣಿಕೆ ನಡೆಸುತ್ತಿರುವ ಕುರಿತು ಖಚಿತ ವರ್ತಮಾನ ಅನುಸರಿಸಿ ಕಾರ್ಯಾಚರಣೆ ನಡೆಸಲಾಯಿತು ಎಂದು ಎಟಿಎಸ್ ಮುಖ್ಯಸ್ಥ ಹಿಮಾಂಶು ಹೇಳಿದ್ದಾರೆ
ಮೀನುಗಾರಿಕಾ ದೋಣಿಯಲ್ಲಿ ಪಾಕಿಸ್ತಾನದಿಂದ ಮಾದಕ ವಸ್ತು ಹೆರಾಯಿನ್ ಕಳ್ಳಸಾಗಾಣಿಕೆ ನಡೆಸುತ್ತಿರುವ ನಿಖರ ಮಾಹಿತಿ ಪಡೆದುಕೊಂಡ ಎಟಿಎಸ್ ಅಧಿಕಾರಿಗಳು ಭಾರತೀಯ ತಟ ರಕ್ಷಣಾ ಪಡೆಯ ಸಂಪರ್ಕಿಸಿ ಜಂಟಿ ಕಾರ್ಯಾಚರಣೆ ನಡೆಸಿ ಐವರು ಪಾಕಿಸ್ತಾನ ನಾಗರೀಕರನ್ನು ಬಂಧಿಸಿ, ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಎಟಿಎಸ್ ಅಧಿಕಾರಿಗಳ ತಂಡ, ಭಾರತೀಯ ತಟ ರಕ್ಷಣಾ ಪಡೆಯ ವೇಗದ ಇಂಟರ್ ಸೆಪ್ಟರ್ ದೋಣಿಯಲ್ಲಿ ಕಚ್ ನ ಜಕಾವುಗೆ ತೆರಳಿ ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳಸಾಗಾಣಿಕೆದಾರರನ್ನು ಬಂಧಿಸಿದೆ.
ಬಂಧಿತ ಪಾಕಿಸ್ತಾನ ಕಳ್ಳಸಾಗಾಣಿಕೆದಾರರನ್ನು ಅನೀಸ್ ಇಸಾ ಭಟ್ಟಿ(೩೦), ಇಸ್ಮಾಯಿಲ್ ಮೊಹಮದ್ ಕಚ್ಚಿ(೫೦) ಅಶ್ರಫ್ ಉಸ್ಮಾನ್ ಕುಟಚಿ(೪೨) ಕರೀಂ ಅಬ್ದುಲ್ಲಾ ಕುಟಚಿ(೩೭) ಅಬೂಬಕರ್ ಅಶ್ರಫ್ ಸುಮಾರ(೫೫) ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


