ದೇಶ

ನಕಲಿ ವಿಡಿಯೋ ಟ್ವೀಟ್ ಮಾಡಿ ತಾವೇ ಮೂರ್ಖರಾದ ಪಾಕ್ ಪ್ರಧಾನಿ, ಸೇನೆಯ ಕೈಗೊಂಬೆ -ಗಂಭೀರ್

ನಾಂಕನ್ ಸಾಹೇಬ್ ಗುರುದ್ವಾರದ ಮೇಲೆ ದಾಳಿ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಲವಂತವಾಗಿ ಯುವತಿಯನ್ನು ಮತಾಂತರಗೊಳಿಸಲು ನೆರೆಯ ರಾಷ್ಟ್ರ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ನಕಲಿ ವಿಡಿಯೋ ಟ್ವೀಟ್ ಮಾಡಿ ತಾವೇ ಮೂರ್ಖರಾದ ಪಾಕ್ ಪ್ರಧಾನಿ, ಸೇನೆಯ ಕೈಗೊಂಬೆ -ಗಂಭೀರ್
ಗೌತಮ್ ಗಂಭೀರ್, ಇಮ್ರಾನ್ ಖಾನ್
Published On :

ನವದೆಹಲಿ:  ನಾಂಕನ್ ಸಾಹೇಬ್ ಗುರುದ್ವಾರದ ಮೇಲೆ ದಾಳಿ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಲವಂತವಾಗಿ ಯುವತಿಯನ್ನು ಮತಾಂತರಗೊಳಿಸಲು ನೆರೆಯ ರಾಷ್ಟ್ರ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಸ್ಲಿಂರ ವಿರುದ್ಧ ಭಾರತೀಯ ಪೊಲೀಸರ ರಕ್ತಪಾತ ಹರಿಸುವಂತೆ  ಬಿಂಬಿಸುವಂತಿರುವ ವಿಡಿಯೋ  ಶೇರ್ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸೈನ್ಯದ ಕೈ ಗೊಂಬೆ ಎಂದು ಗೌತಮ್ ಗಂಭೀರ್ ಕರೆದಿದ್ದಾರೆ.

ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದ ವಿಡಿಯೋ ಏಳು ವರ್ಷ ಹಳೆಯದಾಗಿದ್ದು, ಅದು ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿರುವ ಘಟನೆಯ ವಿಡಿಯೋ ಆಗಿದೆ. ಅದು ಭಾರತದಲ್ಲ,  ನಂತರ ತಮ್ಮ ತಪ್ಪಿನ ಅರಿವಾಗಿ ಆ ಟ್ವೀಟ್ ನ್ನು ಡಿಲಿಟೀ ಮಾಡಿದ್ದರು.

ಗುರುದ್ವಾರದ ಮೇಲೆ ಕಲ್ಲು ತೂರಾಟದ ವಿಡಿಯೋವನ್ನು ಟ್ವೀಟ್ ಮಾಡಿರುವ  ಗೌತಮ್ ಗಂಭೀರ್, ಯುವತಿಯನ್ನು ಬಲವಂತದಿಂದ ಮತಾಂತರಗೊಳಿಸಲು ಅಮಾಯಕ ಪ್ರವಾಸಿಗರ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಜೀವ ಬೆದರಿಕೆ ಹಾಕಲಾಗುತ್ತಿದೆ. ಇದು ಪಾಕಿಸ್ತಾನ .ಆದ್ದರಿಂದ ಭಾರತ ಸಿಎಎ ಬೆಂಬಲಿಸುತ್ತಿದೆ. ಸೇನೆಯ ಕೈಗೊಂಬೆಯಾಗಿರುವ ಪ್ರಧಾನಿ ಇಮ್ರಾನ್ ಖಾನ್, ನಕಲಿ ವಿಡಿಯೋ ಶೇರ್ ಮಾಡಿ ತಾವೇ ಮೂರ್ಖರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.