ಭಾರತ-ಮ್ಯಾನ್ಮಾರ್ ನಡುವೆ ವಿವಿಧ ಕ್ಷೇತ್ರಗಳ 10 ಒಪ್ಪಂದಗಳ ವಿನಿಮಯ
ಮೂಲಸೌಕರ್ಯ, ಇಂಧನ, ಸಂವಹನ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 10 ಮಹತ್ವದ ಒಪ್ಪಂದಗಳನ್ನು ಭಾರತ ಮತ್ತು ಮ್ಯಾನ್ಮಾರ್ ಗುರುವಾರ ವಿನಿಮಯ ಮಾಡಿಕೊಂಡಿವೆ.

ನವದೆಹಲಿ: ಮೂಲಸೌಕರ್ಯ, ಇಂಧನ, ಸಂವಹನ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 10 ಮಹತ್ವದ ಒಪ್ಪಂದಗಳನ್ನು ಭಾರತ ಮತ್ತು ಮ್ಯಾನ್ಮಾರ್ ಗುರುವಾರ ವಿನಿಮಯ ಮಾಡಿಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮೈಂಟ್ ಅವರ ನಡುವೆ ಹೈದರಾಬಾದ್ ಹೌಸ್‌ನಲ್ಲಿ ನಡುವೆ ನಡೆದ ಮಾತುಕತೆ ನಂತರ ಒಪ್ಪಂದಗಳು ಮತ್ತು ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು. ಉಭಯ ನಾಯಕರು ದ್ವಿಪಕ್ಷೀಯ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆ ನಡೆಸಿದರು. ಯು ವಿನ್ ಮೈಂಟ್ ಅವರು ತಮ್ಮ ಪತ್ನಿ ಡಾ ಚೋ ಚೋ ಅವರೊಂದಿಗೆ ಭಾರತದ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಬುಧವಾರ ಇಲ್ಲಿಗೆ ಆಗಮಿಸಿದ್ದಾರೆ.
ನಿನ್ನೆ ಮ್ಯಾನ್ಮಾರ್ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ರಾಜ್‌ಘಾಟ್‌ಗೆ ಭೇಟಿ ನೀಡಿದ ಯು ವಿನ್ ಮೈಂಟ್ ದಂಪತಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜೀ ಅವರಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರೊಂದಿಗೆ ಯು ವಿನ್ ಮೈಂಟ್ ಮಾತುಕತೆ ನಡೆಸಿದರು. ಭಾರತ ಮತ್ತು ಮ್ಯಾನ್ಮಾರ್ ಧಾರ್ಮಿಕ, ಭಾಷೆ ಮತ್ತು ಜನಾಂಗೀಯ ಸಂಬಂಧಗಳನ್ನು ಹೊಂದಿವೆ. ಭಾರತದ ಗಡಿಯಲ್ಲಿರುವ ಮ್ಯಾನ್ಮಾರ್, ಆಗ್ನೇಯ ಏಷ್ಯಾಕ್ಕೆ ಹೆಬ್ಬಾಗಿಲು ಒದಗಿಸುವ ಏಕೈಕ ಆಸಿಯಾನ್ ದೇಶ ಮ್ಯಾನ್ಮಾರ್ ಆಗಿದೆ.
ಮ್ಯಾನ್ಮಾರ್‌ನೊಂದಿಗೆ ಸಹಕಾರವನ್ನು ಹೆಚ್ಚಿಸಲು ಭಾರತವು ಒತ್ತು ನೀಡಿದೆ. ಭಾರತ, ಮ್ಯಾನ್ಮಾರ್‌ನ ಐದನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದ್ದು, ಸದ್ಯದ ದ್ವಿಪಕ್ಷೀಯ ವ್ಯಾಪಾರ- ವಾಣಿಜ್ಯ ವಹಿವಾಟು 7 1.7 ಶತಕೋಟಿ ಡಾಲರ್ ನಷ್ಟಿದೆ. ಮ್ಯಾನ್ಮಾರ್ ಅಧ್ಯಕ್ಷರು ಬೋಧ್ ಗಯಾ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


