ಸಹಪಾಠಿಗಳ ಮೇಲೆ ವಿದ್ಯಾರ್ಥಿಯಿಂದ ಆಸಿಡ್ ದಾಳಿ ನಾಲ್ವರಿಗೆ ಗಾಯ
10 ನೇತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಆಸಿಡ್ ಎರಚಿದ ಪರಿಣಾಮ ನಾಲ್ಕು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ ಪುರದಲ್ಲಿ ನಡೆದಿದೆ.

ಹಮೀರ್ ಪುರ: 10 ನೇತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಆಸಿಡ್ ಎರಚಿದ ಪರಿಣಾಮ ನಾಲ್ಕು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ ಪುರದಲ್ಲಿ ನಡೆದಿದೆ.
ಉತ್ಪುರದಲ್ಲಿರುವ ಶಾಲೆಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. 10 ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ಹಾಗೂ 9ನೇ ತರಗತಿಯ ಅಪ್ರಾಪ್ತನೊಬ್ಬ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾರ್ಷಿಕ ಪರೀಕ್ಷೆಯ ಪ್ರಾಕ್ಟಿಕಲ್ಸ್ ಇದ್ದ ಕಾರಣ ನಿನ್ನೆ ಸಂಜೆಯವರೆಗೂ ಶಾಲೆ ತೆರೆದಿತ್ತು. ಶಾಲೆಯು ಇನ್ನೇನು ಮುಚ್ಚಬೇಕು ಎನ್ನುವ ಸಮಯದಲ್ಲಿ ವಿಜ್ಞಾನ ಪ್ರಯೋಗಾಲಯದಿಂದ ಬಂದ ಆತನ ಸೀನಿಯರ್ ಆಸಿಡ್ ಎರಚಿದ ಎಂದು ಗಾಯಗೊಂಡಿರುವ 9ನೇ ತರಗತಿ ವಿದ್ಯಾರ್ಥಿ ತಿಳಸಿದ್ದಾನೆ.
ಘಟನೆ ನಡೆದ ಸಮಯದಲ್ಲಿ ತಾನು ಮೂರು ಹುಡುಗಿಯರೊಂದಿಗೆ ಕ್ಲಾಸ್ ರೂಮಿನ ಹೊರಗೆ ಕುಳಿತಿದ್ದೆ, ಆಗ ಆ ಹುಡುಗಿಯರ ಮುಖದ ಮೇಲೆ ಕೂಡ ಬಿದ್ದಿದೆ ಎಂದು ಅವರು ಹೇಳಿದರು. ಈ ಸಂಬಂಧಪ್ರಕರಣ ದಾಖಲಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


