ಕೇಜ್ರಿವಾಲ್ ಪದಗ್ರಹಣ ಸಮಾರಂಭದಲ್ಲಿ' ಚೋಟಾ ಮಫ್ಲರ್ ಮ್ಯಾನ್ ಗಳು!
ರಾಮಲೀಲಾ ಮೈದಾನದಲ್ಲಿ ನಡೆದ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಪದಗ್ರಹಣ ಸಮಾರಂಭದಲ್ಲಿ ಚೋಟಾ ಮಫ್ಲರ್ ಮ್ಯಾನ್ ಗಳು ಎಲ್ಲರ ಗಮನ ಸೆಳೆದರು.

ನವದೆಹಲಿ: ರಾಮಲೀಲಾ ಮೈದಾನದಲ್ಲಿ ನಡೆದ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಪದಗ್ರಹಣ ಸಮಾರಂಭದಲ್ಲಿ ಚೋಟಾ ಮಫ್ಲರ್ ಮ್ಯಾನ್ ಗಳು ಎಲ್ಲರ ಗಮನ ಸೆಳೆದರು.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಅರವಿಂದ್ ಕೇಜ್ರಿವಾಲ್ ರೀತಿಯಲ್ಲಿ ಉಡುಪು ಧರಿಸಿದ್ದ ಅವ್ಯಾನ್ ತೋಮರ್ ಒಂದೇ ಒಂದು ದಿನಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಗೆ ಬಂದಿದ್ದ.ಫೆಬ್ರವರಿ 11 ರಂದು ಆಮ್ ಆದ್ಮಿ ಪಕ್ಷದ ಹೊರಗಡೆ ಕೇಜ್ರಿವಾಲ್ ರೀತಿಯ ಸ್ವೆಟರ್, ಕನ್ನಡಕ ಹಾಗೂ ಎಎಪಿ ಟೋಪಿ ಧರಿಸಿದ್ದ 1 ವರ್ಷದ ಅವ್ಯಾನ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದ.
ಆದರೆ, ಇಂದು ನಡೆದ ಸಮಾರಂಭದಲ್ಲಿ ಅವ್ಯಾನ್ ಜೊತೆಗೆ ಇನ್ನೂ ಅನೇಕ ಚೋಟಾ ಮಫ್ಲರ್ ಮ್ಯಾನ್ ಗಳು ಪಾಲ್ಗೊಂಡಿದ್ದರು. ವೇದಿಕೆ ಮುಂಭಾಗದಲ್ಲಿ ಕೇಜ್ರಿವಾಲ್ ರೀತಿಯಲ್ಲಿ ಉಡುಪು ಧರಿಸಿದ್ದ ನಾಲ್ಕೈದು ಚೋಟಾ ಮಫ್ಲರ್ ಮ್ಯಾನ್ ಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾದರು.
ಕೇಜ್ರಿವಾಲ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕೇಜ್ರಿವಾಲ್ ಜಿಂದಾಬಾದ್ ಎಂದು ಚೋಟಾ ಮಫ್ಲರ್ ಮ್ಯಾನ್ ಗಳಲ್ಲಿ ಒಬ್ಬ ಬಾಲಕನಾದ ಜಾಯಿದ್ ಹುಸೈನ್ ಅವರ ತಾಯಿ ರುಕ್ಸಾನಾ ಬೇಗಂ ಹೇಳಿದರು. ಪದೇ ಪದೇ ಕೇಜ್ರಿವಾಲ್ ಘೋಷಣೆ ಕೂಗುವಂತೆ ರುಕ್ಸಾನಾ ಬೇಗಂ , ತನ್ನ ಮಗನಿಗೆ ನಿರ್ದೇಶಿಸುತ್ತಿದ್ದ ದೃಶ್ಯ ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


