ಗೌರ್ನರ್ ಗೆ ಪೂಜಾ ಸಾಮಗ್ರಿ ಮಾರಲು ನಿರಾಕರಣೆ, ಗಂಟೆಗಟ್ಟಲೆ ಕಾಯುವಂತೆ ಮಾಡಿದ ವಾರಾಣಸಿ ವರ್ತಕರು!
ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಅವರು ವಾರಾಣಸಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಕಾಲ ಭೈರವ ದೇವಾಲಯದ ಎದುರು ಗಂಟೆಗಟ್ಟಲೆ ಪೂಜಾ ಸಾಮಗ್ರಿಗಳಿಗಾಗಿ ಕಾದು ನಿಲ್ಲಬೇಕಾದ ಸ್ಥಿತಿ ಎದುರಾಗಿತ್ತು.

ಲಖನೌ: ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಅವರು ವಾರಾಣಸಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಕಾಲ ಭೈರವ ದೇವಾಲಯದ ಎದುರು ಗಂಟೆಗಟ್ಟಲೆ ಪೂಜಾ ಸಾಮಗ್ರಿಗಳಿಗಾಗಿ ಕಾದು ನಿಲ್ಲಬೇಕಾದ ಸ್ಥಿತಿ ಎದುರಾಗಿತ್ತು.
ದೇವಾಲಯದ ಬಳಿ ಇದ್ದ ವರ್ತಕರು ಯಾರೂ ಸಹ ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಅವರಿಗೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲು ನಿರಾಕರಿಸಿದ ಪರಿಣಾಮ ಈ ಘಟನೆ ನಡೆದಿದೆ. ಇದೇನಪ್ಪಾ, ಗೌರ್ನರ್ ಮೇಲೆ ಏಕೆ ವರ್ತಕರ ಮುನಿಸು ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ.
ಹಾಗಂತ ವರ್ತಕರ ಕೋಪ ಇದ್ದದ್ದು ಗೌರ್ನರ್ ಮೇಲೆ ಅಲ್ಲ. ತಮಗೆ ಬಾಕಿ ನೀಡಬೇಕಿದ್ದ ಹಣವನ್ನು ನೀಡದೇ ಇದ್ದ ಜಿಲ್ಲಾಡಳಿತದ ಮೇಲಿನ ಕೋಪವನ್ನು ಗೌರ್ನರ್ ನ ಕಾಯಿಸುವ ಮೂಲಕ ಹೊರ ಹಾಕಿದ್ದಾರೆ.
ವರ್ತಕರ ವರ್ತನೆಗೆ ವಾರಾಣಸಿ ಜಿಲ್ಲಾಡಳಿತ ಕುಪಿತಗೊಂಡಿದೆ. ಜಿಲ್ಲಾಡಳಿತ ಈ ಹಿಂದಿನ ಬಾಕಿಯನ್ನು ಪಾವತಿ ಮಾಡುವವರೆಗೂ ತಾವು ಗೌರ್ನರ್ ಗೆ ಪೂಜಾ ಸಾಮಗ್ರಿ ಮಾರಾಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಪರಿಪರಿಯಾಗಿ ಭರವಸೆಗಳನ್ನು ನೀಡಿದರೂ ಸಹ ಅಂಗಡಿ ಮಾಲಿಕರು ಬಗ್ಗಲಿಲ್ಲ. ಪರಿಣಾಮ ಗೌರ್ನರ್ ಪೂಜೆಗಾಗಿ ದೇವಾಲಯದ ಒಳಗೆ ಕಾಯುವಂತಾಯಿತು. ವಿವಿಐಪಿಗಳು ದೇವಾಲಯಕ್ಕೆ ಭೇಟಿ ನೀಡಿದಾಗ ಪೂಜಾಸಾಮಗ್ರಿಗಳು ಪ್ರಸಾದಕ್ಕೆ ವ್ಯವಸ್ಥೆ ಮಾಡುವ ಹೊಣೆಗಾರಿಕೆ ಜಿಲ್ಲಾಡಳಿತದ್ದೇ ಆಗಿರುತ್ತದೆ.
ಕಳೆದ ವಾರ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಹಾಗೂ ಅವರ ತಂಡ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿತ್ತು. ಆಗಲೂ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿತ್ತು. ಸುಮಾರು 30 ಜನಕ್ಕೆ ಆಗುವಷ್ಟು ಪೂಜಾ ಸಾಮಗ್ರಿಗಳನ್ನು ಜಿಲ್ಲಾಡಳಿತ ಖರೀದಿಸಿತ್ತು. ಆದರೆ ಒಂದೇ ಒಂದು ರೂಪಾಯಿಯನ್ನೂ ನೀಡಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


