ಕಾಶಿ ವಿಶ್ವನಾಥ, ಬೌದ್ಧ ಯಾತ್ರಾ ಸ್ಥಳ, ತಿರುಪತಿಗೆ ಶ್ರೀಲಂಕಾ ಪ್ರಧಾನಿ ರಾಜಪಕ್ಸ
ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ 5 ದಿನಗಳ ಭಾರತ ಪ್ರವಾಸದಲ್ಲಿದ್ದು ಕಾಶಿ ವಿಶ್ವನಾಥ ದೇವಾಲಯ, ಸಾರನಾಥದಲ್ಲಿರುವ ಬೌದ್ಧ ಯಾತ್ರಾ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ಲಖ್ನೋ: ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ 5 ದಿನಗಳ ಭಾರತ ಪ್ರವಾಸದಲ್ಲಿದ್ದು ಕಾಶಿ ವಿಶ್ವನಾಥ ದೇವಾಲಯ, ಸಾರನಾಥದಲ್ಲಿರುವ ಬೌದ್ಧ ಯಾತ್ರಾ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ರಾಜಪಕ್ಸ ಭೇಟಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಜಪಕ್ಸ ಸಾರನಾಥ ದೇವಾಲಯಕ್ಕೆ ತೆರಳಲಿದ್ದು, ಉತ್ತರ ಪ್ರದೇಶದಲ್ಲೇ ರಾತ್ರಿ ತಂಗಲಿದ್ದಾರೆ. ಫೆ.10 ರಂದು ಬೆಳಿಗ್ಗೆ ಬೋಧ್ ಗಯಾ ಕೇಂದ್ರದಲ್ಲಿರುವ ಮಹಾಬೋಧಿ ದೇವಾಲಯಕ್ಕೆ ರಾಜಪಕ್ಸ ತೆರಳಲಿದ್ದು, ಆ ನಂತರ ತಿರುಪತಿ ವೆಂಕಟೇಶ್ವರ ದೇವಾಲಯದ ದರ್ಶನ ಮಾಡಲಿದ್ದಾರೆ.
ಮಹಿಂದಾ ರಾಜಪಕ್ಸ ತಿರುಪತಿ ದೇವಾಲಯದ ಕಟ್ಟಾ ಭಕ್ತರಾಗಿದ್ದು, ತಿರುಪತಿ ದೇವಾಲಯದ ದರ್ಶನದ ಬಳಿಕ ಶ್ರೀಲಂಕಾಗೆ ವಾಪಸ್ಸಾಗಲಿದ್ದಾರೆ. 5 ದಿನಗಳ ಭಾರತ ಪ್ರವಾಸದಲ್ಲಿ ರಾಜಪಕ್ಸ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳಾದಿಯಾಗಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


