ಕೊರೋನಾವೈರಸ್ ಬಗ್ಗೆ ಎಚ್ಚರಿಕೆ ನೀಡಿದ್ದ ವೈದ್ಯ ಬಲಿ
ಚೀನಾದಲ್ಲಿ ಸಾರ್ಸ್ ರೀತಿಯ ಕೊರೋನಾ ವೈರಸ್ ಹಬ್ಬುತ್ತಿದೆ ಎಂದು ಪೊಲೀಸರು ಹಾಗೂ ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ರೂಪದ ಮಾಹಿತಿ ನೀಡಿದ್ದ ಲೀ ವೆನ್ ಲಿಯಾಂಗ್ ಎಂಬ ವೈದ್ಯ ಕೊರೋನಾ ವೈರಸ್'ಗೆ ಬಲಿಯಾಗಿದ್ದಾರೆ.

ಬೀಜಿಂಗ್: ಚೀನಾದಲ್ಲಿ ಸಾರ್ಸ್ ರೀತಿಯ ಕೊರೋನಾ ವೈರಸ್ ಹಬ್ಬುತ್ತಿದೆ ಎಂದು ಪೊಲೀಸರು ಹಾಗೂ ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ರೂಪದ ಮಾಹಿತಿ ನೀಡಿದ್ದ ಲೀ ವೆನ್ ಲಿಯಾಂಗ್ ಎಂಬ ವೈದ್ಯ ಕೊರೋನಾ ವೈರಸ್'ಗೆ ಬಲಿಯಾಗಿದ್ದಾರೆ.
ಲೀ ವೆನ್ ಸಾವಿನ ಬಳಿಗ ಜಾಗತಿಕವಾಗಿ ಇದೀಗ ಆಕ್ರೋಶಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಲೀ ಸಾವನ್ನಪ್ಪಿಲ್ಲ. ಅವರ ಹೃದಯ ಬಡಿತ ನಿಂತಿದೆಯಷ್ಟೇ. ಚಿಕಿತ್ಸೆ ಮುಂದುವರೆದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಕೊರೋನಾ ವೈರಸ್ ಬಗ್ಗೆ ತಿಳಿದಿದ್ದ ಲೀ ವೆನ್ ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿಯೇ ಅಧಿಕಾರಿಗಳಿಗೆ ಎಚ್ಚರಿಕೆ ರೂಪದ ಮಾಹಿತಿ ನೀಡಿದ್ದರು. ವುಹಾನ್ ನಲ್ಲಿ ವೈರಸ್ ಹರಡುತ್ತಿರುವ ಎಚ್ಚರಿಕೆಯನ್ನು ಲೀ ನೀಡಿದ್ದರು.
ಕೆಲವರಲ್ಲಿ ಕಂಡು ಬಂದಿರುವ ವೈರಸ್ ಕೊರೋನಾ ವೈರಸ್ ಆಗಿದ್ದು, ಈ ವೈರಸ್ ಅತ್ಯಂತ ಅಪಾಯಕಾರಿಯಾಗಿದ್ದು, ಸಾರ್ಸ್ ರೀತಿಯಲ್ಲಿಯೇ ಹಲವರಿಗೆ ಹರಡುವ ಸಾಧ್ಯತೆಗಳಿವೆ ಎಂದು ಹೇಳಿದ್ದರು. ಲೀಯವರು ನೀಡಿದ್ದ ಈ ಮಾಹಿತಿ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಾನು ನೀಡಿದ್ದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾಹಿತಿ ಸೋರಿಕೆಯಾಗಿದ್ದರಿಂದ ಅದು ನನ್ನ ನಿಯಂತ್ರಣದಲ್ಲಿರಲಿಲ್ಲ. ಈ ವೇಳೆ ನನಗೆ ಶಿಕ್ಷೆಯಾಗಬಹುದು ಎಂದು ತಿಳಿದಿದ್ದೆ ಎಂದು ಈ ಹಿಂದೆ ಲೀ ವೆನ್ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಚಾರದ ಬಗ್ಗೆ ಮಾಹಿತಿ ಪಡೆದಿದ್ದ ವುಹಾನ್ ಪೊಲೀಸರು, ಸುಖಾಸುಮ್ಮನೆ ಜನರಲ್ಲಿ ಭೀತಿ ಹುಟ್ಟಿಸಲು ಈ ರೀತಿಯ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


