ಯಾರೋ ಪ್ರಧಾನಿಯಾಗುವ ಬಯಕೆಯಿಂದ ಭಾರತ ಅಂದು ಇಬ್ಭಾಗವಾಯಿತು: ನೆಹರೂ ವಿರುದ್ಧ ಪ್ರಧಾನಿ ಮೋದಿ ಆರೋಪ
ನ್ ಡಿಎ ಸರ್ಕಾರ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ಧರ್ಮದವರ ಮೇಲೆ ತಾರತಮ್ಯವೆಸಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಗುರುವಾರ ತಿರುಗೇಟು ನೀಡಿದ್ದಾರೆ.

ನವದೆಹಲಿ: ಎನ್ ಡಿಎ ಸರ್ಕಾರ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ಧರ್ಮದವರ ಮೇಲೆ ತಾರತಮ್ಯವೆಸಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಗುರುವಾರ ತಿರುಗೇಟು ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮಾತನಾಡುವ ಸಂದರ್ಭದಲ್ಲಿ ಮೋದಿ, ಜವಹರಲಾಲ್ ನೆಹರೂ, ಭಾರತ ವಿಭಜನೆ, ತುರ್ತು ಪರಿಸ್ಥಿತಿ ಮತ್ತು 1984ರ ಸಿಖ್ ವಿರೋಧಿ ದಂಗೆ ಬಗ್ಗೆ ಪ್ರಸ್ತಾಪಿಸಿದರು.
ಯಾರೋ ಒಬ್ಬರು ಪ್ರಧಾನಿಯಾಗಬೇಕೆಂದು ಆಸೆಯಿಂದ ಭಾರತವನ್ನು ವಿಭಜಿಸಿ ಎರಡು ದೇಶಗಳನ್ನಾಗಿ ಹೋಳು ಮಾಡಿದರು. ದೇಶ ಇಬ್ಭಾಗವಾದ ನಂತರ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ಖರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಯಾವ ರೀತಿ ನೋಡಲಾಯಿತು, ಎಷ್ಟು ಕಿರುಕುಳ ನೀಡಲಾಯಿತು ಎಂದು ಊಹಿಸಲೂ ಅಸಾಧ್ಯ ಎಂದರು.
1950ರಲ್ಲಿ ನೆಹರೂ-ಲಿಯಾಕತ್ ಅಲಿ ಒಪ್ಪಂದ ವೇಳೆ ಪಾಕಿಸ್ತಾನದಲ್ಲಿ ಧರ್ಮ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವುದಿಲ್ಲ ಎಂದು ಒಪ್ಪಂದವಾಗಿತ್ತು. ನೆಹರೂರಂತಹ ಜಾತ್ಯತೀತವಾದಿಗಳು ದೂರದೃಷ್ಟಿ ಹೊಂದಿದ್ದವರು ಆಗ ಏಕೆ ಎಲ್ಲಾ ನಾಗರಿಕರನ್ನು ಒಪ್ಪಂದದಲ್ಲಿ ಪರಿಗಣಿಸಿರಲಿಲ್ಲ? ಇದಕ್ಕೆ ಆಗ ಏನಾದರೊಂದು ಕಾರಣ ಇದ್ದಿರಬಹುದಲ್ಲವೇ ಎಂದು ಕೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


