ದೇಶ

ಜಾಮಿಯಾ, ಶಾಹೀನ್ ಬಾಗ್ ಪ್ರತಿಭಟನೆ ಭಾರತ ಇಬ್ಭಾಗ ಮಾಡುವ ಪಿತೂರಿ: ಪ್ರಧಾನಿ ಮೋದಿ

ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಜಾಮಿಯಾ ಹಾಗೂ ಸಾಹೀನ್ ಬಾಗ್ ಪ್ರತಿಭಟನೆ ಸೇರಿದಂತೆ....

ಜಾಮಿಯಾ, ಶಾಹೀನ್ ಬಾಗ್ ಪ್ರತಿಭಟನೆ ಭಾರತ ಇಬ್ಭಾಗ ಮಾಡುವ ಪಿತೂರಿ: ಪ್ರಧಾನಿ ಮೋದಿ
ಪ್ರಧಾನಿ ಮೋದಿ
Published On :

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಜಾಮಿಯಾ ಹಾಗೂ ಸಾಹೀನ್ ಬಾಗ್ ಪ್ರತಿಭಟನೆ ಸೇರಿದಂತೆ ಈ ಎಲ್ಲಾ ಪ್ರತಿಭಟನೆಗಳ ಹಿಂದೆ ವಿರುದ್ಧ ರಾಜಕೀಯ ಪಿತೂರಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

ಇಂದು ದೆಹಲಿಯಲ್ಲಿ ಮೊದಲ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಅರಾಜಕತೆಯಿಂದ ಕೂಡಿದ್ದು, ಇದು ಕಾಂಗ್ರೆಸ್​ ಮತ್ತು ಆಪ್​ ಪಕ್ಷಗಳ ಪ್ರಚೋದನೆಯಿಂದ ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಸಿಎಎ ವಿರುದ್ಧ ಜಾಮಿಯಾ, ಶಾಹಿನ್ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಆಕಸ್ಮಿಕವೇ ಎಂದು ಪ್ರಶ್ನಿಸಿದ ಪ್ರಧಾನಿ, ಸೀಲಂಪುರ್​, ಜಾಮಿಯಾ, ಶಾಹೀನ್​ಬಾಗ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ. ದೇಶದ ಸಾಮರಸ್ಯವನ್ನು ಹಾಳುಗೆಡುವಿ, ಇಬ್ಬಾಗ ಮಾಡುವ ಪಿತೂರಿ ಎಂದು ದೂರಿದರು.

ಆಧುನಿಕ ಮತ್ತು ಸುರಕ್ಷಿತ ದೆಹಲಿ ಬೇಕೆಂದರೆ ಬಿಜೆಪಿಗೆ ಮತಹಾಕಬೇಕು. ನಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ. ದೆಹಲಿ ಜನರಿಗೆ ಏನು ಬೇಕು ಎಂಬುದನ್ನು ನಾನು ಕೇಳುವುದಿಲ್ಲ. ಕಾರಣ ಇದರ ಬಗ್ಗೆ ನನಗೆ ಸಂಪೂರ್ಣ ಚಿತ್ರಣವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ಶಕ್ತಿ ತುಂಬಿದ್ದಾರೆ. ಅವರ ಮತಗಳು ಭವಿಷ್ಯವನ್ನು ಬದಲಾಯಿಸಲು ನಮಗೆ ಸಹಕಾರ ನೀಡುತ್ತದೆ ಎಂದರು.

ನಮ್ಮದೇ ಆದ ಮನೆಹೊಂದಬೇಕು ಎಂಬುದು ಪ್ರತಿಯೊಬ್ಬರ ಕನಸು. ಕೇಂದ್ರ ಸರ್ಕಾರ ದೇಶದಲ್ಲಿ ಎರಡು ಕೋಟಿ ಮನೆ ನಿರ್ಮಾಣ ಮಾಡಿದೆ, ಆದರೆ ದೆಹಲಿಯಲ್ಲಿ ಒಂದೂ ಮನೆ ನಿರ್ಮಾಣವಾಗಿಲ್ಲ. ಆಪ್​ ಸರ್ಕಾರ ಇಂತಹ ಯೋಜನೆಗೆ ಅಡ್ಡಗಾಲಾಗಿ ನಿಂತಿದೆ ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.