ರಜನಿಯಂತೆ ಕಮಲ್ ಹಾಸನ್ ಕೂಡ ರಾಜಕೀಯ ತೊರೆಯಬೇಕು: ತಮಿಳುನಾಡು ಸಚಿವ ಸೆಲ್ಲೂರ್ ರಾಜು
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಮುನ್ನವೇ ರಾಜಕೀಯ ತ್ಯಜಿಸುವ ನಿರ್ಧಾರವನ್ನು ಸ್ವಾಗತಿಸಿದ ತಮಿಳುನಾಡು ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಅವರು...

ಮಧುರೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಮುನ್ನವೇ ರಾಜಕೀಯ ತ್ಯಜಿಸುವ ನಿರ್ಧಾರವನ್ನು ಸ್ವಾಗತಿಸಿದ ತಮಿಳುನಾಡು ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಅವರು, ನಟ ಕಮಲ್ ಹಾಸನ್ ಕೂಡ ಇದನ್ನೆ ಮಾಡಬೇಕು ಎಂದು ಹೇಳಿದ್ದಾರೆ.
"ರಜನಿಕಾಂತ್ ಅವರು ತಮ್ಮ ಆರೋಗ್ಯ ಮತ್ತು ಅವರ ರಾಜಕೀಯ ಪ್ರಯಾಣದಲ್ಲಿ ಅವರೊಂದಿಗೆ ಬಂದವರ ಕಲ್ಯಾಣವನ್ನು ಪರಿಗಣಿಸಿ ಬುದ್ಧಿವಂತ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರಂತೆ ಕಮಲ್ ಹಾಸನ್ ಸಹ ರಾಜಕೀಯ ತೊರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.
'ಉಲಗ ನಾಯಗನ್'(ಕಮಲ್ ಹಾಸನ್) ಸಿನಿಮಾ ಉದ್ಯಮಕ್ಕೆ ಮಾತ್ರ ಅನ್ವಯಿಸುತ್ತದೆ, ರಾಜಕೀಯಕ್ಕೆ ಅಲ್ಲ, ಅದರಲ್ಲಿ ಅವರಿಗೆ ಪರಿಣತಿಯ ಕೊರತೆಯಿದೆ ಎಂದ ಸಚಿವರು, ನಟರು ಚಿತ್ರರಂಗದಲ್ಲಿ ಬದಲಾವಣೆಗಳನ್ನು ತರಬಹುದು. ಆದರೆ ರಾಜಕೀಯದಲ್ಲಿ ಬದಲಾವಣೆಗಳನ್ನು ತರುವ ಸಮಯ ಅಥವಾ ವಯಸ್ಸು ಅವರ ಪರವಾಗಿಲ್ಲ ಎಂದು ಹೇಳಿದ್ದಾರೆ.
ತಾವು ಅಧಿಕಾರಕ್ಕೆ ಬಂದರೆ ಮಾಜಿ ಎಐಎಡಿಎಂಕೆ ಮುಖ್ಯಸ್ಥ ಎಂ.ಜಿ.ರಾಮಚಂದ್ರನ್ ಅವರಂತೆ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದ ಕಮಲ್ ಹಾಸನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ರಾಜು, ಚಿತ್ರರಂಗದಿಂದ ಬಂದವರೆಲ್ಲರೂ ಎಂಜಿಆರ್ ಆಗಲು ಸಾಧ್ಯವಿಲ್ಲ. ಡಿಎಂಕೆ ನಾಯಕ ಎಂ ಕರುಣಾನಿಧಿ ಅವರು 20 ವರ್ಷಗಳ ಕಾಲ ರಾಜ್ಯವನ್ನು ಆಳಿದ್ದರೂ, ಅವರು ಮತ್ತು ಇತರೆ ಯಾವುದೇ ರಾಜಕಾರಣಿಗಳು 'ಕಲೈನಾರ್ ಆಡಳಿತ'ದ ವಾಗ್ದಾನ ಮಾಡಲಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


