ಇನ್ಮೇಲೆ ವಾಹನಗಳ ಮೇಲೆ ಜಾತಿ ಹೆಸರು ಬರೆಸಿದರೆ ದಂಡ!
ಜಾತಿ ಸೂಚಕ ಹೆಸರುಗಳನ್ನು ವಾಹನಗಳ ಮೇಲೆ ಬರೆಸಿದರೆ ದಂಡ ವಿಧಿಸುವ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸೂಚನೆ ನೀಡಲಾಗಿದೆ.

ಲಖನೌ: ಜಾತಿ ಸೂಚಕ ಹೆಸರುಗಳನ್ನು ವಾಹನಗಳ ಮೇಲೆ ಬರೆಸಿದರೆ ದಂಡ ವಿಧಿಸುವ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶ ಸಾರಿಗೆ ಆಯುಕ್ತರು ಈ ಆದೇಶ ಹೊರಡಿಸಿದ್ದು, ಈ ರೀತಿಯಾದ ಬರಹಗಳು ಯಾವುದೇ ನಂಬರ್ ಪ್ಲೇಟ್ ಗಳು ಹಾಗೂ ವಾಹನಗಳ ಮೇಲೆ ಕಂಡುಬಂದಲ್ಲಿ ಈಗಾಗಲೇ ಇರುವ ನಿಯಮಗಳ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಕಚೇರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ ಸಾಮಾನ್ಯವಾಗಿ ನೀಡಬಹುದಾದ ಚಲನ್ ಗಳನ್ನೇ ಈ ಪ್ರಕರಣಗಳಲ್ಲಿಯೂ ನೀಡಬೇಕಾಗುತ್ತದೆ, ಕಾನೂನಿನಲ್ಲಿ ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ವ್ಯಕ್ತಿಯ ಸಾಮಾಜಿಕ ಸ್ತರವನ್ನು ಪ್ರದರ್ಶಿಸುವುದು, ಜಾತಿಗಳ ಹೆಸರನ್ನು ಬರೆಸಿಕೊಳ್ಳುವುದು ರಾಜ್ಯದಲ್ಲಿ ಟ್ರೆಂಡ್ ಆಗುತ್ತಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನಿಯಮಗಳನ್ನು ಕಠಿಣವಾಗಿ ಜಾರಿಗೆ ತರಲು ಸೂಚಿಸಲಾಗಿದೆ ಎಂದು ಯುಪಿ ಸಾರಿಗೆ ಆಯುಕ್ತ ಧೀರಜ್ ಸಾಹು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


