ದೇಶ

'ಅಣ್ಣಾತೆ' ಚಿತ್ರ ತಂಡದ 8 ಮಂದಿಗೆ ಕೊರೋನಾ ಪಾಸಿಟಿವ್, ರಜನಿ ಸೆಲ್ಫ್ ಕ್ವಾರಂಟೈನ್

ತಮಿಳು ಸೂಪರ್​ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತೆ' ಚಿತ್ರ ತಂಡದ ಎಂಟು ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ತಲೈವಾ ಸ್ವಯಂ ಕ್ವಾರಂಟೈನ್ ಗೆ ಒಳಗಾಗುವ ಸಾಧ್ಯತೆ ಇದೆ.

'ಅಣ್ಣಾತೆ' ಚಿತ್ರ ತಂಡದ 8 ಮಂದಿಗೆ ಕೊರೋನಾ ಪಾಸಿಟಿವ್, ರಜನಿ ಸೆಲ್ಫ್ ಕ್ವಾರಂಟೈನ್
ರಜನಿಕಾಂತ್
Published On :

ಚೆನ್ನೈ: ತಮಿಳು ಸೂಪರ್​ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತೆ' ಚಿತ್ರ ತಂಡದ ಎಂಟು ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ತಲೈವಾ ಸ್ವಯಂ ಕ್ವಾರಂಟೈನ್ ಗೆ ಒಳಗಾಗುವ ಸಾಧ್ಯತೆ ಇದೆ.

'ಅಣ್ಣಾತೆ' ಚಿತ್ರ ತಂಡದ 8 ಮಂದಿಗೆ ಕೊರೋನಾ ಪಾಸಿಟಿವ್ ಬಂದ ನಂತರ ರಜನಿಂಕಾತ್ ಅವರು ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಅವರ ವರದಿ ನೆಗಟಿವ್ ಬಂದಿದೆ. ಆದರೆ ಸ್ವಯಂ ಕ್ವಾರಂಟೈನ್ ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.

ರಜನಿಕಾಂತ್ ಅವರು ಡಿಸೆಂಬರ್ 15ರಂದು ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ 'ಅಣ್ಣಾತೆ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರೊಂದಿಗೆ ಇದ್ದ ಎಂಟು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ರಜನಿಕಾಂತ್ ಅವರ ಪ್ರಚಾರಕ ರಿಯಾಜ್ ಅಹಮ್ಮದ್ ಅವರು ಖಚಿತಪಡಿಸಿದ್ದಾರೆ.

'ವಿಶ್ವಾಸಂ', 'ವೀರಂ', 'ವೇದಾಳಂ' ಚಿತ್ರದ ಯಶಸ್ವಿ ನಿರ್ದೇಶಕ ಸಿರುಥೈ ಶಿವಾ ಅವರು 'ಅಣ್ಣಾತೆ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಯನತಾರಾ, ಖುಷ್ಬೂ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಮೀನಾ, ಸೂರಿ ಸೇರಿ ಬಹುತಾರಾಗಣವನ್ನು ಈ ಚಿತ್ರ ಹೊಂದಿದೆ. ಹಿರಿಯರಿಗೆ ಅಥವಾ ಪ್ರಭಾವಿ ವ್ಯಕ್ತಿಗಳಿಗೆ ತಮಿಳಿನಲ್ಲಿ 'ಅಣ್ಣಾತೆ' ಎಂದು ಸಂಬೋಧಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.