ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಗಾಗಿ 1.89 ಲಕ್ಷ ಮರಗಳ ಮಾರಣ ಹೋಮ!

ಬಾಂಡಾ: ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಗಾಗಿ 1.89 ಲಕ್ಷ ಮರಗಳನ್ನು ಉತ್ತರ ಪ್ರದೇಶದ ಅಧಿಕಾರಿಗಳು ಕಡಿದು ಹಾಕಿದ್ದಾರೆ.
ಕುಲ್ದೀಪ್ ಶುಕ್ಲಾ ಸಲ್ಲಿಸಿದ್ದ ಆರ್ ಟಿಐ ಗೆ ಉತ್ತರ ಪ್ರದೇಶ ಅರಣ್ಯ ಇಲಾಖೆಯ ಹಿರಿಯ ವ್ಯವಸ್ಥಾಪಕ ಅತುಲ್ ಆಸ್ತಾನ ಎಕ್ಸ್ ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಇಐಡಿಎ) 296 ಕಿ.ಮೀ ಉದ್ದದ ಯೋಜನೆಗಾಗಿ 1,89,036 ಮರಗಳನ್ನು ತೆರವುಗೊಳಿಸಿದೆ ಎಂದು ಹೇಳಿದ್ದಾರೆ.
ಬಾಂದಾ, ಚಿತ್ರಕೂಟ್, ಮಹೋಬ್, ಹಮೀರ್ ಪುರ್, ಜಲೌನ್, ಔರೈಯಾ ಹಾಗೂ ಇಟಾವಾಗಳಲ್ಲಿ ಮರಗಳನ್ನು ಕಡಿಯಲಾಗಿದೆ.
ಮರಗಳನ್ನು ಕಡಿದಿರುವುದಕ್ಕೆ ಪರ್ಯಾಯವಾಗಿ 2.70 ಲಕ್ಷ ಗಿಡಗಳನ್ನು ಎಕ್ಸ್ ಪ್ರೆಸ್ ವೇ ಇಕ್ಕೆಲಗಳಲ್ಲಿ ನೆಡುವುದಾಗಿ ಆರ್ ಟಿಐ ಮಾಹಿತಿಯಲ್ಲಿ ತಿಳಿಸಲಾಗಿದೆ. ಕೇಂದ್ರದ ಅನುಮತಿಯೊಂದಿಗೆ ಮರಗಳನ್ನು ಕತ್ತಿರಿಸಲಾಗಿದೆ ಎಂದು ಆರ್ ಟಿಐ ಮಾಹಿತಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


