ದೇಶ

ಕಿರಿಯ ಸೊಸೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕತ್ತು ಸೀಳಿ ಕೊಂದ ಪತ್ನಿ- ಹಿರಿಯ ಸೊಸೆ!

ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ತನ್ನ ಪತ್ನಿ ಹಾಗೂ ಸೊಸೆಯಿಂದಲೇ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ವರದಿಯಾಗಿದೆ.

ಕಿರಿಯ ಸೊಸೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕತ್ತು ಸೀಳಿ ಕೊಂದ ಪತ್ನಿ- ಹಿರಿಯ ಸೊಸೆ!
ಕಿರಿಯ ಸೊಸೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕತ್ತು ಸೀಳಿ ಕೊಂದ ಪತ್ನಿ- ಹಿರಿಯ ಸೊಸೆ!
Published On :

ಲಖನೌ: ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ತನ್ನ ಪತ್ನಿ ಹಾಗೂ ಸೊಸೆಯಿಂದಲೇ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ವರದಿಯಾಗಿದೆ.

ಕೋಯ್ರಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಾತ್ರಿ ವೇಳೆ ವ್ಯಕ್ತಿಯ ಪತ್ನಿ ಹಾಗೂ ಕುಟುಂಬದ ಹಿರಿಯ ಸೊಸೆ ಕತ್ತು ಸೀಳಿ 55 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಎಸ್ ಪಿ ರಾಮ್ ಬದನ್ ಸಿಂಗ್ ಮಾಹಿತಿ ನೀಡಿದ್ದಾರೆ. 

ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ಪೊಲೀಸ್ ತಿಳಿಸಿದ್ದಾರೆ. ಮೃತ ವ್ಯಕ್ತಿಗೆ ನಾಲ್ವರು ಮಕ್ಕಳಿದ್ದು ಎಲ್ಲರೂ ಮುಂಬೈ ನಲ್ಲಿ ವಲಸಿಗ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ, ಈ ಪೈಕಿ ಇಬ್ಬರು ಗಂಡು ಮಕ್ಕಳಿಗೆ ವಿವಾಹವಾಗಿದ್ದಾರೆ. ಸೊಸೆಯರು ಮಾತ್ರ ಗ್ರಾಮದಲ್ಲಿರುವ ಗಂಡನ ಮನೆಯಲ್ಲಿದ್ದರು.

ಕಿರಿಯ ಸೊಸೆಯ ಜೊತೆಗೇ ಮಾವ ಅಕ್ರಮ ಸಂಬಂಧ ಹೊಂದಿದ್ದು ಆತನ ಪತ್ನಿ ಮತ್ತು ಹಿರಿಯ ಸೊಸೆಗೆ ತಿಳಿದು ಕಿರಿಯ ಸೊಸೆಯನ್ನು ತವರು ಮನೆಗೆ ಕಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ವ್ಯಕ್ತಿ ಹಿರಿಯ ಸೊಸೆ ಮೇಲೆ ಹಲ್ಲೆ ನಡೆಸಿ, ಮನೆಯಿಂದ ಹೊರಹಾಕಿ ಹತ್ತಿರದಲ್ಲೇ ಬೇರೊಂದು ಮನೆಯಲ್ಲಿರುವಂತೆ ಮಾಡಿದ್ದ.

ಈ ಬಳಿಕ 4-5 ದಿನಗಳ ಹಿಂದೆಯಷ್ಟೇ ಕಿರಿಯ ಸೊಸೆಯನ್ನು ತವರು ಮನೆಯಿಂದ ವಾಪಸ್ ಕರೆಸಿಕೊಂಡು ತನ್ನೊಟ್ಟಿಗೇ ಇರಿಸಿಕೊಂಡಿದ್ದ, ಇದನ್ನು ಅರಿತ ಆತನ ಪತ್ನಿ ಹಾಗೂ ಹಿರಿಯ ಸೊಸೆ ತಮ್ಮ ಮನೆಗೆ ನುಗ್ಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ಕಿರಿಯ ಸೊಸೆ ಪೊಲೀಸರಿಗೆ ಹತ್ಯೆಯ ವಿಷಯವನ್ನು ತಿಳಿಸಿ ದೂರು ದಾಖಲಿಸಿದ್ದು ಹತ್ಯೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.