ಅಸ್ಸಾಂ: ಬಿಟಿಸಿಯಲ್ಲಿ ಅಧಿಕಾರ ಹಿಡಿಯಲು ಮೈತ್ರಿ ಮುರಿದುಕೊಂಡು ಹೊಸ ಮೈತ್ರಿಗೆ ಮುಂದಾದ ಬಿಜೆಪಿ
ಅಸ್ಸಾಂನಲ್ಲಿ ಬೋಡೋ ಪ್ರಾಬಲ್ಯವಿರುವ ಪ್ರದೇಶದಲ್ಲಿ ಸ್ವಾಯತ್ತ ಆಡಳಿತ ನಡೆಸುವ ಬೋಡೋಲ್ಯಾಂಡ್ ಪ್ರಾಂತೀಯ ಪರಿಷತ್ (ಬಿಟಿಸಿ) ಸ್ವಾಯತ್ತ ಸಂಸ್ಥೆಯಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಬಿಜೆಪಿ ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್) ನೊಂದಿಗಿನ ಮೈತ್ರಿಯನ್ನು ಬಿಟ್ಟು ಬಿಟಿಸಿಯೊಂದಿಗೆ ಕೈ ಜೋಡಿಸಿದೆ.

ಗುವಾಹಟಿ: ಅಸ್ಸಾಂನಲ್ಲಿ ಬೋಡೋ ಪ್ರಾಬಲ್ಯವಿರುವ ಪ್ರದೇಶದಲ್ಲಿ ಸ್ವಾಯತ್ತ ಆಡಳಿತ ನಡೆಸುವ ಬೋಡೋಲ್ಯಾಂಡ್ ಪ್ರಾಂತೀಯ ಪರಿಷತ್ (ಬಿಟಿಸಿ) ಸ್ವಾಯತ್ತ ಸಂಸ್ಥೆಯಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಬಿಜೆಪಿ ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್) ನೊಂದಿಗಿನ ಮೈತ್ರಿಯನ್ನು ಬಿಟ್ಟು ಬಿಟಿಸಿಯೊಂದಿಗೆ ಕೈ ಜೋಡಿಸಿದೆ.
ಸರ್ಬಾನಂದ್ ಸೋನೋವಾಲ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಬಿಪಿಎಫ್ ನ ಮೂವರು ಸಚಿವರಿದ್ದಾರೆ. ಬಿಪಿಎಫ್ 40 ಸದಸ್ಯರನ್ನೊಳಗೊಂಡ ಬಿಟಿಸಿ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 12 ಸ್ಥಾನಗಳಲ್ಲಿ ಗೆದ್ದಿರುವ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ನ್ನು 9 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ತಮ್ಮ ಮಿತ್ರಪಕ್ಷವೆಂದು ಘೋಷಿಸಿದ್ದು, ಯುಪಿಪಿಎಲ್ ನ ಮುಖ್ಯಸ್ಥ ಪ್ರಮೋದ್ ಬೋರೋ ಬಿಟಿಸಿಯ ಮುಂದಿನ ಮುಖ್ಯ ಕಾರ್ಯನಿರ್ವಹಣಾ ಸದಸ್ಯರಾಗಿರಲಿದ್ದಾರೆ ಎಂದು ಸಿಎಂ ಸರ್ಬಾನಂದ್ ಸೋನೋವಾಲ್ ಹೇಳಿದ್ದಾರೆ.
ಈ ನಡುವೆ ಬಿಟಿಸಿ ಚುನಾವಣೆಯಲ್ಲಿ ಎನ್ ಡಿಎ ಬಹುಮತ ಗಳಿಸಿರುವುದನ್ನು ಮೋದಿ ಮತ್ತು ಅಮಿತ್ ಶಾ ಟ್ವೀಟ್ ಮ್ಮೂಲಕ ಸ್ಪಷ್ಟಪಡಿಸಿದ್ದು, ಯುಪಿಪಿಎಲ್ ನ್ನು ಮಿತ್ರ ಪಕ್ಷವೆಂದು ಹೇಳಿ ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


