ದೇಶ

ವಿಚಿತ್ರವಾದರೂ ನಿಜ: ಗೋರಖ್‌ಪುರದಲ್ಲಿ ಒಂದೇ ಮಂಟಪದಲ್ಲಿ ತಾಯಿ ಮತ್ತು ಮಗಳ ಮದುವೆ!

ಉತ್ತರಪ್ರದೇಶದ ಗೋರಖ್‌ಪುರ ಅಸಾಮಾನ್ಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಒಂದೇ ಮಂಟಪದಲ್ಲಿ ತಾಯಿ ಮತ್ತು ಮಗಳು ಮದುವೆ ಮಾಡಿಕೊಂಡಿದ್ದಾರೆ.

ವಿಚಿತ್ರವಾದರೂ ನಿಜ: ಗೋರಖ್‌ಪುರದಲ್ಲಿ ಒಂದೇ ಮಂಟಪದಲ್ಲಿ ತಾಯಿ ಮತ್ತು ಮಗಳ ಮದುವೆ!
ಸಂಗ್ರಹ ಚಿತ್ರ
Published On :

ಲಖನೌ: ಉತ್ತರಪ್ರದೇಶದ ಗೋರಖ್‌ಪುರ ಅಸಾಮಾನ್ಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಒಂದೇ ಮಂಟಪದಲ್ಲಿ ತಾಯಿ ಮತ್ತು ಮಗಳು ಮದುವೆ ಮಾಡಿಕೊಂಡಿದ್ದಾರೆ. 

53 ವರ್ಷದ ಮಹಿಳೆ ಮತ್ತು ಅವರ 27 ವರ್ಷದ ಮಗಳು ತಮ್ಮ ಇನಿಯನ ಜೊತೆ ಒಂದೇ ‘ಮಂಟಪ’ದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಗೋರಖ್‌ಪುರದ ಪಿಪ್ರೌಲಿ ಬ್ಲಾಕ್‌ನಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಾಯಿ ಮತ್ತು ಮಗಳು ಇಬ್ಬರೂ ಒಂದೇ ಸಮಯದಲ್ಲಿ ವಿವಾಹವಾದರು.

ವಿಧವೆ ಮಹಿಳೆ ತನ್ನ ಗಂಡನ ಕಿರಿಯ ಸಹೋದರನನ್ನು ಮದುವೆಯಾದರು. 63 ದಂಪತಿಗಳ ಪೈಕಿ ಈ ದಂಪತಿಯೂ ಒಬ್ಬರಾಗಿದ್ದಾರೆ. ಇನ್ನು ಇದೇ ವೇಳೆ ಹಲವು ಮುಸ್ಲಿಂ ದಂಪತಿಗಳು ಸತಿಪತಿಗಳಾಗಿದ್ದಾರೆ. ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಬಿಡಿಒ ಡಾ ಸಿ.ಎಸ್ ಕುಶ್ವಾಹ ಸತ್ಯಪಾಲ್ ಸಿಂಗ್ ಮತ್ತು ಇನ್ನೊಬ್ಬ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೇಲಿ ದೇವಿ ಅವರು ಹರಿಹರ್ ಅವರನ್ನು ವಿವಾಹವಾಗಿದ್ದರು. ಅವರಿಂದ ಬೇಲಿ ದೇವಿ ಮೂವರು ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದರು. ಆದರೆ 25 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದರು. ಈಗ, ಕಿರಿಯ ಮಗಳು ಇಂದೂ ಹೊರತುಪಡಿಸಿ ಅವಳ ಎಲ್ಲಾ ಮಕ್ಕಳು ಮದುವೆಯಾಗಿ ತಮ್ಮ ಕುಟುಂಬಗಳೊಂದಿಗೆ ನೆಲೆಸಿದ್ದರಿಂದ, ಬೇಲಿ ದೇವಿ ತನ್ನ ಉಳಿದ ಜೀವನವನ್ನು ತನ್ನ ಗಂಡನ ಸಹೋದರ 55 ವರ್ಷದ ಜಗದೀಶ್ ಜೊತೆ ಇರಲು ಇಚ್ಛಿಸಿ ವಿವಾಹವಾಗಿದ್ದಾರೆ.

“ರೈತ ಜಗದೀಶ್ ಅವಿವಾಹಿತರಾಗಿದ್ದಾರೆ. ಇನ್ನು ನನ್ನ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಈಗಾಗಲೇ ಮದುವೆಯಾಗಿದೆ. ನನ್ನ ಕಿರಿಯ ಮಗಳ ವಿವಾಹದೊಂದಿಗೆ, ಗಂಡನ ಕಿರಿಯ ಸಹೋದರರನ್ನು ಮದುವೆಯಾಗಲು ನಿರ್ಧರಿಸಿದೆ. ಇದರಿಂದ ನನ್ನ ಎಲ್ಲಾ ಮಕ್ಕಳು ಸಂತೋಷವಾಗಿದ್ದಾರೆ ಎಂದು ಬೇಲಿ ದೇವಿ ತಮ್ಮ ಹೊಸ ಜೀವನದ ಅಧ್ಯಾಯವನ್ನು ಪ್ರಾರಂಭಿಸುವ ಮೊದಲು ಸಂತೋಷದ ಹೊಳಪಿನಿಂದ ಹೇಳಿದರು.

ಇಂದೂ 29 ವರ್ಷದ ರಾಹುಲ್ ಅವರನ್ನು ವಿವಾಹವಾಗಿದ್ದಾರೆ. “ನನ್ನ ತಾಯಿಯ ಮದುವೆ ವಿಚಾರವಾಗಿ ನನ್ನ ಒಡಹುಟ್ಟಿದವರಲ್ಲಿ ಯಾರಿಗೂ ತಿರಸ್ಕಾರವಿಲ್ಲ. ನನ್ನ ತಾಯಿ ಮತ್ತು ಚಿಕ್ಕಪ್ಪ ನಮ್ಮನ್ನು ನೋಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಆಸರೆಯಾಗಿ ಒಟ್ಟಾಗಿರುವುದಕ್ಕೆ ನಮಗೆ ಈಗ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.