ನಿಮ್ಮ ಮಗಳಾಗಿ ಹುಟ್ಟಿದ್ದು ನನ್ನ ಅದೃಷ್ಟ; ಪ್ರಣಬ್ ಪುತ್ರಿ ಭಾವೋದ್ವೇಗದ ಟ್ವೀಟ್
ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ನಿಧನದಿಂದಾಗಿ ಇಡೀ ದೇಶ ದುಃಖದಲ್ಲಿ ಮುಳುಗಿ ಹೋಗಿದೆ.

ನವದೆಹಲಿ: ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ನಿಧನದಿಂದಾಗಿ ಇಡೀ ದೇಶ ದುಃಖದಲ್ಲಿ ಮುಳುಗಿ ಹೋಗಿದೆ.
ಪ್ರಣಬ್ ಮುಖರ್ಜಿ ನಿಧನಕ್ಕೆ ನಾನಾ ವಲಯಗಳ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ತಂದೆಯ ಮರಣದಿಂದ ಶೋಕಸಾಗರದಲ್ಲಿ ಮುಳುಗಿರುವ ಅವರ ಪುತ್ರಿ ಶರ್ಮಿಷ್ಟ ಮುಖರ್ಜಿ ಭಾವೋದ್ವೇಗದಿಂದ ಟ್ವೀಟ್ ಮಾಡಿದ್ದಾರೆ.
ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಆರಂಭಿಸಿರುವ ಶರ್ಮಿಷ್ಟ ಅಪ್ಪ ಎಲ್ಲರೂ ನಿಮಗೆ ಅಂತಿಮ ವಿದಾಯ ಸಲ್ಲಿಸಲು ನಿಮ್ಮ ಅಚ್ಚುಮೆಚ್ಚಿನ ಕವಿಯ ಸಾಲುಗಳನ್ನು ಉಲ್ಲೇಖಿಸುವ ಸ್ವತಂತ್ರ ಪಡೆದುಕೊಳ್ಳುತ್ತೇನೆ.
ದೇಶ ಸೇವೆಯಲ್ಲಿ, ಜನರ ಸೇವೆಯಲ್ಲಿ ನೀವು ಸಂಪೂರ್ಣವಾಗಿ ಆರ್ಥಪೂರ್ಣವಾಗಿ ಜೀವನ ನಡೆಸಿದಿರಿ. ನಿಮ್ಮ ಮಗಳಾಗಿ ಜನಿಸಿದ್ದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ ಎಂದು ನುಡಿದಿದ್ದಾರೆ. ಇನ್ನೂ ಆರ್ಮಿ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಪ್ರಣಬ್ ಮುಖರ್ಜಿ ಸೋಮವಾರ ಸಂಜೆ ಕೊನೆ ಉಸಿರೆಳೆದರು. ಕೋವಿಡ್ ಸೋಂಕಿನ ಜತೆಗೆ ಇತರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


