ಸೀಮಿತ ಪ್ರಯಾಣಿಕರು, ಮಾಸ್ಕ್, ಸ್ಮಾರ್ಟ್ ಕಾರ್ಡು ಕಡ್ಡಾಯ:ದೆಹಲಿ ಮೆಟ್ರೊ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟ
ಕೊರೋನಾ ವೈರಸ್ ಸೋಂಕು ನಿವಾರಣೆಗೆ ದೇಶಾದ್ಯಂತ ಕಳೆದ ಮಾರ್ಚ್ ನಲ್ಲಿ 3 ವಾರಗಳ ಬಿಗಿ ಲಾಕ್ ಡೌನ್ ಘೋಷಿಸಿ ನಂತರ ಹಂತ ಹಂತವಾಗಿ ಸಡಿಲ ಮಾಡುತ್ತಾ ಸರ್ಕಾರ ಬಂದಿತು.

ನವದೆಹಲಿ: ಕೊರೋನಾ ವೈರಸ್ ಸೋಂಕು ನಿವಾರಣೆಗೆ ದೇಶಾದ್ಯಂತ ಕಳೆದ ಮಾರ್ಚ್ ನಲ್ಲಿ 3 ವಾರಗಳ ಬಿಗಿ ಲಾಕ್ ಡೌನ್ ಘೋಷಿಸಿ ನಂತರ ಹಂತ ಹಂತವಾಗಿ ಸಡಿಲ ಮಾಡುತ್ತಾ ಸರ್ಕಾರ ಬಂದಿತು.
ಇದೀಗ 5 ತಿಂಗಳ ನಂತರ ಬಹುತೇಕ ಚಟುವಟಿಕೆಗಳು ಹಿಂದಿನ ಸಹಜ ಸ್ಥಿತಿಗೆ ಬರುತ್ತಿದ್ದು, ಹಲವು ಸೇವೆಗಳು ಪುನರಾರಂಭಗೊಂಡಿವೆ. ದೇಶಾದ್ಯಂತ ಮೆಟ್ರೊ ಸೇವೆ ಸೆಪ್ಟೆಂಬರ್ 7ರಂದು ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ದೆಹಲಿ ಮೆಟ್ರೊ ಮಾರ್ಗಸೂಚಿ ಹೊರಡಿಸಿದೆ.
ಮಾರ್ಗಸೂಚಿಯಲ್ಲಿ ಏನೇನಿದೆ: ಸೆಪ್ಟೆಂಬರ್ 7ರಂದು ಮೆಟ್ರೊ ಸೇವೆ ಪುನರಾರಂಭಗೊಂಡ ನಂತರ ಮೆಟ್ರೊದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್, ಸ್ಮಾರ್ಟ್ ಕಾರ್ಡು ಕಡ್ಡಾಯವಾಗಿರುತ್ತದೆ. ಟೋಕನ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ, ಪ್ರಯಾಣಿಕರು ಹಣ ನೀಡಲು ಸ್ಮಾರ್ಟ್ ಕಾರ್ಡು ಮತ್ತು ಇತರ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಪ್ರತಿ ಬೋಗಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರಯಾಣಿಕರಿರುತ್ತಾರೆ.
ಬೋಗಿಗಳ ಒಳಗೆ ಹೊರಗಿನ ಗಾಳಿ ಸಿಗಬೇಕಾಗಿರುವುದರಿಂದ ಹವಾನಿಯಂತ್ರಿತ ವ್ಯವಸ್ಥೆಯನ್ನು ಬಂದ್ ಮಾಡಲಾಗುತ್ತದೆ. ಪ್ರಮುಖ ಎಲ್ಲಾ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗುವುದಿಲ್ಲ, ಹಂತ ಹಂತವಾಗಿ ಮೆಟ್ರೊ ಸೇವೆ ಪುನರಾರಂಭವಾಗುತ್ತದೆ.
ಮೆಟ್ರೊ ನಿಲ್ದಾಣಗಳಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅಳವಡಿಸಲಾಗುತ್ತದೆ. ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್ ನ್ನು ಪಾಲಿಸಲಾಗುತ್ತದೆ. ಕೈಗೆ ಸ್ಯಾನಿಟೈಸರ್ ಕೂಡ ಕಡ್ಡಾಯವಾಗಿ ಹಚ್ಚಿಕೊಳ್ಳಬೇಕು.
ಕಂಟೈನ್ ಮೆಂಟ್ ವಲಯಗಳಲ್ಲಿನ ಮೆಟ್ರೊ ನಿಲ್ದಾಣಗಳು ಕಾರ್ಯನಿರ್ವಹಿಸುವುದಿಲ್ಲ.ಸದ್ಯಕ್ಕೆ ಕಾರ್ಯನಿರ್ವಹಿಸದ ಮೆಟ್ರೊ ನಿಲ್ದಾಣಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೊಟ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


