ದೇಶ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ಮಾಸ್ಕೋಗೆ

ಮುಂದಿನ ತಿಂಗಳು 4 ಮತ್ತು 5 ರಂದು ನಡೆಯಲಿರುವ ರಕ್ಷಣಾ ಮಂತ್ರಿಗಳ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಭೆಯಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ಮಾಸ್ಕೋಗೆ ತೆರಳಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ಮಾಸ್ಕೋಗೆ
ರಾಜನಾಥ್ ಸಿಂಗ್
Published On :

ನವದೆಹಲಿ: ಮುಂದಿನ ತಿಂಗಳು 4 ಮತ್ತು 5 ರಂದು ನಡೆಯಲಿರುವ ರಕ್ಷಣಾ ಮಂತ್ರಿಗಳ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಭೆಯಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ಮಾಸ್ಕೋಗೆ ತೆರಳಲಿದ್ದಾರೆ.

ಸೆಪ್ಟೆಂಬರ್ 10 ರಂದು ನಡೆಯಲಿರುವ ಎಸ್ಸಿಒ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾದ ಸಹವರ್ತಿ ಸೆರ್ಗೆ ಲಾವ್ರೊವ್ ಅವರು ಆಹ್ವಾನ ನೀಡಲಾಗಿದೆ .

ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ಸಭೆಗೆ ಹಾಜರಾಗುವ ಬಗ್ಗೆ ಇನ್ನೂ ದೃಢೀಕರಿಸಿಲ್ಲ. ಸಭೆಯಲ್ಲಿ ಜೈಶಂಕರ್ ಭಾಗವಹಿಸುವ ಬಗ್ಗೆ ಕೇಳಿದಾಗ, ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮುಂದಿನ ತಿಂಗಳು ನಡೆಯಲಿರುವ ಎಸ್ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ ಅದರೆ ಸಚಿವ ಶಂಕರ್ ಹಾಜರಿ ಇನ್ನೂ ತೀರ್ಮಾನವಾಗಿಲ್ಲ ಆದರೆ ರಾಜನಾಥ ಸಿಂಗ್ ಹಾಜರಿ ಬಹುತೇಕ ಖಚಿತವಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. 

ಸೆಪ್ಟೆಂಬರ್ 10 ರಂದು ರಷ್ಯಾ ಎಸ್‌ಸಿಒ ವಿದೇಶೀ ಮಂತ್ರಿಗಳ ಸಭೆ ನಡೆಸಲಿದ್ದು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್ ಜೈಶಂಕರ್ ಅವರು ಸಭೆಗಾಗಿ ರಷ್ಯಾಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಈ ಭೇಟಿಗೆ ರಷ್ಯಾದಿಂದ ಆಹ್ವಾನ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೃಢಪಡಿಸಿದ್ದರೂ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆಯೆ ಎನ್ನುವುದು ಕುರಿತು  ಇನ್ನೂ ಔಪಚಾರಿಅ ಪ್ರಕಟಣೆ ಬಂದಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.