ಪುರಾತನ ಭಾರತೀಯ ವಿಜ್ಞಾನವನ್ನು ಸಂಸ್ಕೃತದಲ್ಲಿ ಬೋಧಿಸಲಿರುವ ಐಐಟಿ-ಇಂದೋರ್
ಪುರಾತನ ಭಾರತೀಯ ವಿಜ್ಞಾನವನ್ನು ಸಂಸ್ಕೃತದಲ್ಲಿ ಬೋಧಿಸುವ ತರಗತಿಗಳನ್ನು ಐಐಟಿ-ಇಂದೋರ್ ಪ್ರಾರಂಭಿಸಿದೆ.

ಇಂದೋರ್: ಪುರಾತನ ಭಾರತೀಯ ವಿಜ್ಞಾನವನ್ನು ಸಂಸ್ಕೃತದಲ್ಲಿ ಬೋಧಿಸುವ ತರಗತಿಗಳನ್ನು ಐಐಟಿ-ಇಂದೋರ್ ಪ್ರಾರಂಭಿಸಿದೆ.
ಭಾಸ್ಕರಾಚಾರ್ಯರ ಗಣಿತದ ಗ್ರಂಥ ಲೀಲಾವತಿಯಿಂದ ಮೊದಲುಗೊಂಡು ಶಾಸ್ತ್ರೀಯ ವೈಜ್ಞಾನಿಕ ಪಠ್ಯಗಳನ್ನು ಸಂಸ್ಕೃತದಲ್ಲಿಯೇ ಬೋಧಿಸುವುದಕ್ಕೆ ಪ್ರಾರಂಭಿಸಿದೆ.
ಟೈಮ್ಸ್ ಆಫ್ ಇಂಡಿಯಾದಲ್ಲಿ ಈ ಬಗ್ಗೆ ವರದಿ ಪ್ರಕಟಗೊಂಡಿದ್ದು, ಈ ತರಗತಿಗಳಿಗಾಗಿ ಜಾಗತಿಕ ಮಟ್ಟದಲ್ಲಿ 750 ಮಂದಿ ನೋಂದಣಿ ಮಾಡಿಕೊಂಡಿದ್ದು ಆ.22 ರಿಂದ ಪ್ರಾರಂಭಗೊಂಡಿದೆ.
ತರಗತಿಗಳ ಮೊದಲ ಆವೃತ್ತಿ ಅ.2 ರಂದು ಮುಕ್ತಾಯಗೊಳ್ಳಲಿದೆ. ಮೆಟಲರ್ಜಿ, ಖಗೋಳವಿಜ್ಞಾನ, ಔಷಧ, ಸಸ್ಯ ವಿಜ್ಞಾನಗಳನ್ನೂ ಸಹ ಸಂಸ್ಕೃತದಲ್ಲಿ ಬೋಧಿಸಲು ಯೋಜನೆ ರೂಪಿಸಿದೆ.
ಸಂಸ್ಕೃತ ಪುರಾತನ ಭಾಷೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಸಹ ಸಂಸ್ಕೃತ ಛಾಪು ಮೂಡಿಸುತ್ತಿದೆ, ಸಂಸ್ಕೃತ ಭವಿಷ್ಯದ ಭಾಷೆಯಾಗಲಿದೆ. ಸಂಸ್ಕೃತದಲ್ಲೇ ಪುರಾತನ ಭಾರತೀಯ ವಿಜ್ಞಾನವನ್ನು ಕಲಿತು ಪುರಾತನ ಭಾಷೆಯಲ್ಲೇ ವಿದ್ಯಾರ್ಥಿಗಳು ಸಂವಹನ ನಡೆಸಬಹುದಾಗಿದೆ ಎಂದು ಐಐಟಿ-ಇಂದೋರ್ ನ ನಿರ್ದೇಶಕ ಪ್ರೊಫೆಸರ್ ನೀಲೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


