ಪಂಜಾಬ್ ಶಾಸಕರಿಗೆ ಕೊರೋನಾ ಸೋಂಕು, ಸಿಎಂ ಅಮರೀಂದರ್ ಸಿಂಗ್ ಗೆ ಹೋಮ್ ಕ್ವಾರಂಟೈನ್!
ಪಂಜಾಬ್ ಶಾಸಕರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರ ಸಂಪರ್ಕಕ್ಕೆ ಬಂದ ಕಾರಣ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

ಅಮೃತಸರ: ಪಂಜಾಬ್ ಶಾಸಕರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರ ಸಂಪರ್ಕಕ್ಕೆ ಬಂದ ಕಾರಣ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ.
ಪಂಜಾಬ್ ವಿಧಾನಸಭೆಯಲ್ಲಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಶಾಸಕರ ಪೈಕಿ ಇಬ್ಬರು ಶಾಸಕರ ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವೈದ್ಯರು ಅಮರೀಂದರ್ ಸಿಂಗ್ ಅವರನ್ನು ಹೋಮ್ ಐಸೋಲೇಷನ್ ನಲ್ಲಿ ಇರುವಂತೆ ಸಲಹೆ ನೀಡಿದ್ದಾರೆ.
ಹೀಗಾಗಿ ಅಮರೀಂದರ್ ಸಿಂಗ್ ಅವರು 7 ದಿನ ಸ್ವಯಂ ಗೃಹ ಬಂಧನದಲ್ಲಿದ್ದಾರೆ ಎಂದು ಪಂಜಾಬ್ ಸರ್ಕಾರದ ಮಾಧ್ಯಮ ಸಲಹೆಗಾರರು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಪಂಜಾಬ್ ನ 23 ಶಾಸಕರು ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಇದೇ ಕಾರಣಕ್ಕೆ ಇದೀಗ ರಾಜ್ಯದಲ್ಲಿರುವ ಎಲ್ಲ ಶಾಸಕರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಪಂಜಾಬ್ ನಲ್ಲಿ ಒಟ್ಟು 117 ಶಾಸಕರಿದ್ದು, ಈ ಪೈಕಿ 23 ಮಂದಿ ಶಾಸಕರು ಸೋಂಕಿಗೆ ತುತ್ತಾಗಿದ್ದಾರೆ. ಪಂಜಾಬ್ ನಲ್ಲಿ ಶಾಸಕರು ಮಾತ್ರವಲ್ಲದೇ ಸಚಿವರೂ ಕೂಡ ಸೋಂಕಿಗೆ ತುತ್ತಾಗಿದ್ದು, ಗ್ರಾಮೀಣಾಭಿವದ್ಧಿ ಸಚಿವ ಟ್ರಿಪ್ಟ್ ರಾಜಿಂದರ್ ಬಜ್ವಾ ಅವರು ಸೋಂಕಿಗೆ ತುತ್ತಾದ ಮೊದಲ ಸಚಿವರಾಗಿದ್ದಾರೆ. ಬಳಿಕ ಸಹಕಾರ ಸಚಿವ ಸುಖ್ಜಿಂದರ್ ಸಿಂಗ್ ರಾಂಧವ, ಕಂದಾಯ ಸಚಿವ ಗುರುಪ್ರೀತ್ ಕಂಗಾರ್ ಮತ್ತು ಕೈಗಾರಿಕಾ ಸಚಿವ ಶಾಮ್ ಸುಂದರ್ ಅರೋರಾ ಅವರು ಸೋಂಕಿಗೆ ತುತ್ತಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


