ದೇಶ

ಮಧ್ಯಪ್ರದೇಶದಲ್ಲಿ ಕಟ್ಟಡ ಕುಸಿತ: ಇಬ್ಬರು ಸಾವು, 6 ಮಂದಿಯ ರಕ್ಷಣೆ

ಎರಡು ಅಂತಸ್ತಿನ ಕಟ್ಟಡ ಕುಸಿದುಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ದೇವಾಸ್ ಪ್ರದೇಶ ಸಮೀಪ ಲಾಲ್ ಗೇಟ್ ಹತ್ತಿರ ನಡೆದಿದೆ.

ಮಧ್ಯಪ್ರದೇಶದಲ್ಲಿ ಕಟ್ಟಡ ಕುಸಿತ: ಇಬ್ಬರು ಸಾವು, 6 ಮಂದಿಯ ರಕ್ಷಣೆ
ಸಿಲುಕಿದ್ದವರನ್ನು ರಕ್ಷಿಸಿ ಮೇಲೆ ತರುತ್ತಿರುವುದು
Published On :

ಇಂಧೋರ್:ಎರಡು ಅಂತಸ್ತಿನ ಕಟ್ಟಡ ಕುಸಿದುಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ದೇವಾಸ್ ಪ್ರದೇಶ ಸಮೀಪ ಲಾಲ್ ಗೇಟ್ ಹತ್ತಿರ ನಡೆದಿದೆ.

ಅವಶೇಷಗಳಡಿಯಿಂದ ಇದುವರೆಗೆ 6 ಮಂದಿಯನ್ನು ರಕ್ಷಿಸಲಾಗಿದ್ದು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ.

ಮೊನ್ನೆ ಸೋಮವಾರ ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯ ಮಹದ್ ಪಟ್ಟಣ ಹತ್ತಿರ ತರೇಖ್ ಗಾರ್ಡನ್ ಕಟ್ಟಡ ಕುಸಿದು ಹಲವರು ಅವಶೇಷಗಳಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲಿ ಕೂಡ ಸಂಭವಿಸಿದೆ.

ಪೊಲೀಸರು ಮಹಾರಾಷ್ಟ್ರ ಘಟನೆ ಸಂಬಂಧ ಬಿಲ್ಡರ್ ಮತ್ತು ವಾಸ್ತುಶಿಲ್ಪಿಗಳು ಸೇರಿದಂತೆ ಐವರ ವಿರುದ್ಧ ಕೇಸು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.