ದೇಶ

ಕಾಂಗ್ರೆಸ್ ನಾಯಕರು ಬರೆದ ಗೌಪ್ಯ ಪತ್ರ ಸೋರಿಕೆಯಾದ ಬಗ್ಗೆ ಸೋನಿಯಾ ಅಸಮಾಧಾನ

ಪಕ್ಷದ ನಾಯಕತ್ವ ಸಂಬಂಧದ ಬಗ್ಗೆ ಕಾಂಗ್ರೆಸ್ ನಾಯಕರು ಬರೆದಿದ್ದ ಗೌಪ್ಯ ಪತ್ರ ಸೋರಿಕೆಯಾದ ಬಗ್ಗೆ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರು ಬರೆದ ಗೌಪ್ಯ ಪತ್ರ ಸೋರಿಕೆಯಾದ ಬಗ್ಗೆ ಸೋನಿಯಾ ಅಸಮಾಧಾನ
ಸೋನಿಯಾ ಗಾಂಧಿ
Published On :

ನವದೆಹಲಿ: ಪಕ್ಷದ ನಾಯಕತ್ವ ಸಂಬಂಧದ ಬಗ್ಗೆ ಕಾಂಗ್ರೆಸ್ ನಾಯಕರು ಬರೆದಿದ್ದ ಗೌಪ್ಯ ಪತ್ರ ಸೋರಿಕೆಯಾದ ಬಗ್ಗೆ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬೆಳಗ್ಗೆ 11 ಗಂಟೆಗೆ ಆರಂಭವಾಯಿತು, ಆ ಸಮಯಕ್ಕಾಗಲೇ ಮಾಧ್ಯಮಗಳಲ್ಲಿ ಕಾಂಗ್ರೆಸ್ ನಾಯಕರ ಪತ್ರ ವೈರಲ್ ಆಗಿತ್ತು. ಅದರಲ್ಲಿ  ಭಾಗವಹಿಸಿದ್ದ ಕೆಲವು ನಾಯಕರು ಪತ್ರವನ್ನು ಶೇರ್ ಮಾಡದಂತೆ ಮನವಿ ಮಾಡಿದ್ದರು.

ಹೀಗಾಗಿ ಪಕ್ಷದ 23 ನಾಯಕರು ಬರೆದ ಪತ್ರ ಸೋರಿಕೆಯಾಗಿರುವ ಚರ್ಚೆ ನಡೆಸಲಾಯಿತು.ಪತ್ರದಲ್ಲಿ ಬರೆದಿದ್ದ ವಿಷಯದ ಬಗ್ಗೆ ಸೋನಿಯಾಗಾಂಧಿ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ ಆದರೆ ಗೌಪ್ಯವಾಗಿರಬೇಕಾದ ಪತ್ರ ಸೋರಿಕೆಯಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಾಯಕತ್ವದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಇನ್ನೂ ಈ ಹಿಂದೆ ನಡೆದ ಘಟನೆಯಿಂದ ಪಾಠ ಕಲಿತಿದ್ದ ಕಾಂಗ್ರೆಸ್ ಜೂಮ್ ಮೀಟಿಂಗ್ ರದ್ದುಗೊಳಿಸಿ ವೆಬ್ ಎಕ್ಸ್ ನಲ್ಲಿ ಸಭೆ ನಡೆಸಿದರು.

“ಎಲ್ಲಾ ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ, ಸಭೆಯಲ್ಲಿ ಭಾಗವಾಗಿದ್ದ ಪಕ್ಷದ ಮುಖಂಡರು ಸಭೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು
ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.