ದೇಶ

ಕೋವಿಡ್-19: ಸಂಬಳ ನೀಡದ ಕೇರಳ ಸರ್ಕಾರ, ಹೈಕೋರ್ಟ್ ಮೆಟ್ಟಿಲೇರಿದ ಡಾಕ್ಟರ್ಸ್

ಭತ್ಯೆಯೊಂದಿಗೆ ಸಂಬಳವನ್ನು ಕೂಡಲೇ ವಿತರಿಸುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಎನ್ನದೇ ವಿಶೇಷ ಕರ್ತವ್ಯ ನಿರ್ವಹಿಸುತ್ತಿರುವ 18 ಜ್ಯೂನಿಯರ್ ವೈದ್ಯರ ತಂಡವೊಂದು ಹೈಕೋರ್ಟ್ ಮೆಟ್ಟಿಲೇರಿದೆ.

ಕೋವಿಡ್-19: ಸಂಬಳ ನೀಡದ ಕೇರಳ ಸರ್ಕಾರ, ಹೈಕೋರ್ಟ್ ಮೆಟ್ಟಿಲೇರಿದ ಡಾಕ್ಟರ್ಸ್
ಸಾಂದರ್ಭಿಕ ಚಿತ್ರ
Published On :

ತಿರುವನಂತಪುರಂ: ಭತ್ಯೆಯೊಂದಿಗೆ ಸಂಬಳವನ್ನು ಕೂಡಲೇ ವಿತರಿಸುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಎನ್ನದೇ ವಿಶೇಷ ಕರ್ತವ್ಯ ನಿರ್ವಹಿಸುತ್ತಿರುವ 18 ಜ್ಯೂನಿಯರ್ ವೈದ್ಯರ ತಂಡವೊಂದು ಹೈಕೋರ್ಟ್ ಮೆಟ್ಟಿಲೇರಿದೆ.

ಟಿಎಸ್ ಕೃಷ್ಣ ಪ್ರಿಯಾ ಮತ್ತಿತರರು ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇತರ ವೈದ್ಯರ ಸಂಬಳ, ಡ್ಯೂಟಿ ಟೈಮ್,  ಅರ್ಧ ದಿನ, ಕ್ವಾರಂಟೈನ್, ರಜೆ ಮತ್ತು ಮತ್ತಿತರ ಸೌಲಭ್ಯಗಳನ್ನು ಖಾತ್ರಿಪಡಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

ಜ್ಯೂನಿಯರ್ ವೈದ್ಯರುಗಳಿಗೆ ಸರ್ಕಾರ ಮಾಸಿಕ 42 ಸಾವಿರ ರೂ. ವೇತನವನ್ನು ನಿಗದಿಪಡಿಸಿದ್ದರೂ ಈವರೆಗೂ ನಯಾಪೈಸೆ ವಿತರಿಸಿಲ್ಲ.ಅಂತಹ ವೈದ್ಯರು ತಮ್ಮ ಜೀಬಿನಿಂದ ಹಣ ಖರ್ಚು ಮಾಡಿಕೊಂಡು ಹಗಲು ಇರುಳು ಎನ್ನದೇ ಕೋವಿಡ್-19 ನಿಯಂತ್ರಣಕ್ಕಾಗಿ  ಕಾರ್ಯನಿರ್ವಹಿಸುತ್ತಿರುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.

ಅರ್ಜಿದಾರರು ಎದುರಿಸುತ್ತಿರುವ ಅನ್ಯಾಯ, ಅಸಮಾನತೆ ಕೇವಲ ಸಂಬಳಕ್ಕೆ ಸೀಮಿತವಾಗಿಲ್ಲ, ರಾಷ್ಟ್ರೀಯ ಆರೋಗ್ಯ ಮಿಷನ್, ರಾಷ್ಟ್ರೀಯ ಗ್ರಾಮಾಂತರ ಆರೋಗ್ಯ ಮಿಷನ್ ಮತ್ತು ರಾಜ್ಯ ಸೇವೆ ಅಡಿಯಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಹೋಲಿಸಿದರೆ ಸರ್ಕಾರ ನಿಗದಿಪಡಿಸಿರುವ ಏಕಿಕೃತ ಪಾವತಿ ಯಾವುದಕ್ಕೂ ಸಕಾಗುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಯಾವುದೇ ಸೇವಾ ನಿಯಮಗಳು ಅಥವಾ ಷರತ್ತುಗಳಿಲ್ಲದೆ ಉದ್ಯೋಗ ಮಾಡುತ್ತಿದ್ದರೂ ಯಾವುದೇ ಪದನಾಮ ನೀಡಿಲ್ಲ
ಎಂದು ಅರ್ಜಿದಾರರು ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.