ತೆಲಂಗಾಣ: ಮಣ್ಣಿನ ಗುಡಿಸಲಿನ ಛಾವಣಿ ಕುಸಿದು ಬಿದ್ದು ತಾಯಿ-ಮಕ್ಕಳು ಸ್ಥಳದಲ್ಲಿಯೇ ಸಾವು
ಸತತ ಮಳೆಯಿಂದ ಮಣ್ಣಿನ ಗೋಡೆಯ ಗುಡಿಸಲಿನ ಛಾವಣಿ ಕುಸಿದು ಬಿದ್ದು ತಾಯಿ ಮತ್ತು ಆಕೆಯ ಇಬ್ಬರು ಪುತ್ರಿಯರು ಮೃತಪಟ್ಟ ಘಟನೆ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಪಗಿದ್ಯಾಲ ಗ್ರಾಮದಲ್ಲಿ ನಡೆದಿದೆ.

ಮೆಹಬೂಬ್ ನಗರ: ಸತತ ಮಳೆಯಿಂದ ಮಣ್ಣಿನ ಗೋಡೆಯ ಗುಡಿಸಲಿನ ಛಾವಣಿ ಕುಸಿದು ಬಿದ್ದು ತಾಯಿ ಮತ್ತು ಆಕೆಯ ಇಬ್ಬರು ಪುತ್ರಿಯರು ಮೃತಪಟ್ಟ ಘಟನೆ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಪಗಿದ್ಯಾಲ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು 45 ವರ್ಷದ ಶರಣಮ್ಮ ಮತ್ತು ಆಕೆಯ ಪುತ್ರಿಯರಾದ 14 ವರ್ಷದ ವೈಶಾಲಿ ಮತ್ತು 12 ವರ್ಷದ ಭವಾನಿ ಎಂದು ಗುರುತಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ತೀವ್ರ ಮಳೆ ಸುರಿಯುತ್ತಿತ್ತು. ಇದರಿಂದ ಹಳೆ ಗುಡಿಸಲಿನ ಛಾವಣಿ ಕುಸಿದುಬಿದ್ದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಮ ರಾಜೇಶ್ವರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಶರಣಮ್ಮಳ ಪತಿ ಮಲ್ಲಪ್ಪ ದುರ್ಘಟನೆಯಲ್ಲಿ ಬಚಾವಾಗಿದ್ದು ಈ ವೇಳೆ ಅವರು ಮನೆಯ ಹೊರಗೆ ಮಲಗಿದ್ದರು. ಮೃತಪಟ್ಟವರ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


