ದೇಶ

ದ್ವೇಷ ಭಾಷಣ ಪ್ರಕರಣ: ಫೇಸ್ ಬುಕ್ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

ಭಾರತದಲ್ಲಿ ಫೇಸ್ ಬುಕ್ ನ ನೀತಿ ನಿರೂಪಣೆ ಮುಖ್ಯಸ್ಥರಾಗಿರುವ ಅಂಕಿ ದಾಸ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಚತ್ತೀಸ್ ಗಢದಲ್ಲಿದಲ್ಲಿ ಪ್ರಕರಣದ ದಾಖಲಾಗಿದೆ.

ದ್ವೇಷ ಭಾಷಣ ಪ್ರಕರಣ: ಫೇಸ್ ಬುಕ್ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಪ್ರಕರಣ ದಾಖಲು
ದ್ವೇಷ ಭಾಷಣ ಪ್ರಕರಣ: ಫೇಸ್ ಬುಕ್ ಕಾರ್ಯನಿರ್ವಾಹಕರ ವಿರುದ್ಧ ಪ್ರಕರಣ ದಾಖಲು
Published On :

ರಾಯ್ ಪುರ: ಭಾರತದಲ್ಲಿ ಫೇಸ್ ಬುಕ್ ನ ನೀತಿ ನಿರೂಪಣೆ ಮುಖ್ಯಸ್ಥರಾಗಿರುವ ಅಂಕಿ ದಾಸ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಚತ್ತೀಸ್ ಗಢದಲ್ಲಿದಲ್ಲಿ ಪ್ರಕರಣ ದಾಖಲಾಗಿದೆ. 

ವಾಲ್ ಸ್ಟ್ರೀಟ್ ಜರ್ನಲ್ ಭಾರತದ ಫೇಸ್ ಬುಕ್ ಕಾರ್ಯನಿರ್ವಹಣೆ ಕುರಿತು ಪ್ರಕಟಿಸಿದ್ದ ವರದಿಯಲ್ಲಿ ಫೇಸ್ ಬುಕ್ ಬಿಜೆಪಿ ಹಾಗೂ ಬಲಪಂಥೀಯ ನಾಯಕರ ವಿಚ್ಛಿದ್ರಕಾರಕ ಪೋಸ್ಟ್ ಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಿಸುತ್ತದೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು. ಈ ವರದಿಯ ಬಳಿಕ ಫೇಸ್ ಬುಕ್ ನ ಮುಖ್ಯ ಅಧಿಕಾರಿ ವಿವಾದಕ್ಕೆ ಗುರಿಯಾಗಿದ್ದರು. 

ಈಗ ಈ ವರದಿ ರಾಜಕೀಯಕ್ಕೂ ಬಳಕೆಯಾಗುತ್ತಿದ್ದು ಕಾಂಗ್ರೆಸ್-ಬಿಜೆಪಿ ನಡುವಿನ ವಾಕ್ಸಮರಕ್ಕೆ ಆಹಾರವಾಗಿ ಪರಿಣಮಿಸಿದೆ.  ಏತನ್ಮಧ್ಯೆ ರಾಯ್ ಪುರದಲ್ಲಿ ಅವೇಶ್ ತಿವಾರಿ ಎಂಬ ಪತ್ರಕರ್ತರೊಬ್ಬರು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಫೇಸ್ ಬುಕ್ ಅಧಿಕಾರಿ ಅಂಕಿ ದಾಸ್ ಸಹ ದೂರು ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.