ದೇಶ

ಸೆಕ್ಸ್ ಗೆ ಅವಕಾಶ ನೀಡದ ಪತ್ನಿ; ಖಿನ್ನತೆಯಿಂದ ಪತಿ ಆತ್ಮಹತ್ಯೆ

ಮದುವೆಯಾದರೂ ಪತ್ನಿ ಸೆಕ್ಸ್ ಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಖಿನ್ನತೆಗೊಳಗಾದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಸೆಕ್ಸ್ ಗೆ ಅವಕಾಶ ನೀಡದ ಪತ್ನಿ; ಖಿನ್ನತೆಯಿಂದ ಪತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :

ಅಹ್ಮದಾಬಾದ್: ಮದುವೆಯಾದರೂ ಪತ್ನಿ ಸೆಕ್ಸ್ ಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಖಿನ್ನತೆಗೊಳಗಾದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಗುಜರಾತ್ ನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಸುರೇಂದ್ರ ಸಿಂಗ್ ಎಂಬಾತ ಆತ್ಮಹತ್ಯೆಗೆ ಶರಣಾದ ಪತಿ ಎಂದು ತಿಳಿದುಬಂದಿದೆ. ಸುರೇಂದರ್ ಪತ್ನಿ ಗೀತಾ ವಿರುದ್ಧ ಅವರ ತಾಯಿ ಮಾಲಿ ಪರಮಾರ್ ಅವರು ದೂರು ದಾಖಲಿಸಿದ್ದು, ತನ್ನ ಮಗನ ಸಾವಿಗೆ ಸೊಸೆ ಗೀತಾ ಕಾರಣ ಎಂದು ದೂರಿದ್ದಾರೆ.

ಪೊಲೀಸ್ ನೀಡಿರುವ ಮಾಹಿತಿ ಅನ್ವಯ ಸುರೇಂದ್ರ ಸಿಂಗ್ ಮತ್ತು ಗೀತಾ 2018ರಲ್ಲಿ ಪರಸ್ಪರ ಮದುವೆಯಾಗಿದ್ದರು. ಗೀತಾಗೆ ಇದು ಮೂರನೇ ಮದುವೆಯಾಗಿದ್ದು, ಸುರೇಂದ್ರ ಸಿಂಗ್ ಇದು 2ನೇ ಮದುವೆಯಾಗಿತ್ತು. ಮದುವೆಯಾಗಿ 22 ತಿಂಗಳು ಜೊತೆಯಲ್ಲಿದ್ದರೂ ಪತ್ನಿ ಗೀತಾ ಸೆಕ್ಸ್ ಅವಕಾಶ ನೀಡಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆಯೂ ಆಗಿಂದಾಗ್ಗೆ ಜಗಳ ಕೂಡ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

'ಸುರೇಂದ್ರ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದನು. ಅಕ್ಟೋಬರ್ 2018ರಂದು ಗೀತಾ ಎಂಬ ಯುವತಿ ಜೊತೆ ಮಗನ ಮದುವೆ ಮಾಡಲಾಗಿತ್ತು. ಇದಕ್ಕೂ ಮೊದಲು ಅಂದರೆ 2016ರಲ್ಲಿ ಸುರೇಂದ್ರ ಮೊದಲ ಪತ್ನಿ ಜೊತೆ ವಿಚ್ಛೇದನ ಪಡೆದುಕೊಂಡಿದ್ದನು. ಇತ್ತ ಗೀತಾ ತನ್ನ ಮೊದಲು ಎರಡು ಮದುವೆಗಳಿಂದ ವಿಚ್ಛೇದನ ಪಡೆದುಕೊಂಡಿದ್ದಳು. ಒಂದು ದಿನ ಕೋಣೆಯೊಳಗೆ ಮಗ ಮತ್ತು ಸೊಸೆ ಪ್ರತ್ಯೇಕವಾಗಿ ಮಲಗುತ್ತಿರೋ ವಿಷಯ ನನ್ನ ಗಮನಕ್ಕೆ ಬಂತು. ಮಗನನ್ನ ಕೇಳಿದಾಗ ಇಬ್ಬರ ಮಧ್ಯೆ ದೈಹಿಕ ಸಂಪರ್ಕ ನಡೆದಿಲ್ಲ ಎಂಬ ವಿಷಯ ತಿಳಿಸಿದ. ಈ ಬಗ್ಗೆ ಸೊಸೆಯನ್ನ ಕೇಳಿದಾಗ ಆಕೆ ಪತಿ ಜೊತೆ ಮಲಗಲು ಇಷ್ಟವಿಲ್ಲ ಅಂತ ಹೇಳಿದ್ದಳು. ಈ ಸಂಬಂಧ ಇಬ್ಬರ ನಡುವೆ ಸದಾ ಜಗಳ ನಡೆಯುತ್ತಿತ್ತು. ತನ್ನ ಸಾಂಸರಿಕ ಜೀವನದ ಕುರಿತು ಸುರೇಂದ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇಬ್ಬರ ನಡುವಿನ ಸಂಬಂಧವೂ ಚೆನ್ನಾಗಿರಲಿಲ್ಲ. ಹೀಗಾಗಿ ಸೊಸೆ ಗೀತಾ ತವರು ಮನೆ ಸೇರಿಕೊಂಡಿದ್ದಳು ಎಂದು ಸುರೇಂದ್ರ ಸಿಂಗ್ ತಾಯಿ ದೂರಿನಲ್ಲಿ ಹೇಳಿದ್ದಾರೆ.

ಮನೆಯ ಸದಸ್ಯರು ಹೊರಗೆ ಹೋಗಿದ್ದ ವೇಳೆ ಸುರೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೊಸೆ ಗೀತಾ ಪ್ರಚೋದಿಸಿದ್ದಾಳೆ ಎಂದು ಸುರೇಂದ್ರ ಕುಟುಂಬಸ್ಥರು ಆರೋಪಿಸಿ ದೂರು ದಾಖಲಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.