ದೇಶ

ಚೀನಾ ವಿಷಯದಲ್ಲಿ ಮೋದಿ ಸುಳ್ಳು ಹೇಳುತ್ತಿರುವುದೇಕೆ: ರಕ್ಷಣಾ ಸಚಿವಾಲಯದ ದಾಖಲೆ ಉಲ್ಲೇಖಿಸಿ ರಾಹುಲ್ ಪ್ರಶ್ನೆ

ಭಾರತ-ಚೀನಾ ಗಡಿ ವಿವಾದ ಕುರಿತು ಎಂದಿನಂತೆ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮೇ 17-18ರಂದು ಚೀನಾ ಸೇನೆ ಭಾರತೀಯ ಪ್ರಾಂತ್ಯಗಳ ಮೇಲೆ ಅತಿಕ್ರಮಣ ಮಾಡಿರುವ ಕುರಿತು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಚೀನಾ ವಿಷಯದಲ್ಲಿ ಮೋದಿ ಸುಳ್ಳು ಹೇಳುತ್ತಿರುವುದೇಕೆ: ರಕ್ಷಣಾ ಸಚಿವಾಲಯದ ದಾಖಲೆ ಉಲ್ಲೇಖಿಸಿ ರಾಹುಲ್ ಪ್ರಶ್ನೆ
ರಾಹುಲ್ ಗಾಂಧಿ
Published On :

ನವದೆಹಲಿ: ಭಾರತ-ಚೀನಾ ಗಡಿ ವಿವಾದ ಕುರಿತು ಎಂದಿನಂತೆ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮೇ 17-18ರಂದು ಚೀನಾ ಸೇನೆ  ಭಾರತೀಯ ಪ್ರಾಂತ್ಯಗಳ ಮೇಲೆ ಅತಿಕ್ರಮಣ ಮಾಡಿರುವ ಕುರಿತು ಪ್ರಧಾನಿ ಮೋದಿ ಸುಳ್ಳು  ಹೇಳುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ರಕ್ಷಣಾ ಸಚಿವಾಲಯ ಬಿಡುಗಡೆಗೊಳಿಸಿರುವ ದಾಖಲೆಗಳ ಪ್ರಕಾರ, ಮೇ 17 ಹಾಗೂ 18ರಂದೇ ಚೀನೀ ಸೇನೆ ಕುಗ್ರಾಂಗ್‌ ನಾಲಾ ಮತ್ತು ಪ್ಯಾಂಗಾಂಗ್ ತ್ಸೋನ ಉತ್ತರ ತಟದ ಪ್ರದೇಶವನ್ನು  ಅತಿಕ್ರಮಿಸಿಕೊಂಡಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ. ಆದರೂ, ಈ ಕುರಿತು ಮೋದಿ  ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 

ಟ್ವಿಟರ್‌ ಖಾತೆಯಲ್ಲಿ ಈ ಕುರಿತು ಟ್ವೀಟ್‌ ಮಾಡಿರುವ ಅವರು, ರಕ್ಷಣಾ ಸಚಿವಾಲಯದ ದಾಖಲೆಗಳ  ವರದಿಗಳನ್ನು ಲಗತ್ತಿಸಿದ್ದಾರೆ.  ಈ ರಕ್ಷಣಾ ಸಚಿವಾಲಯದ ಅಧಿಕೃತ ದಾಖಲೆಗಳು ವಾಸ್ತವ ಗಡಿ ರೇಖೆ (ಎಲ್‌ಎಸಿ) ಹಾಗೂ ಮುಖ್ಯವಾಗಿ ಗಾಲ್ವನ್‌ ಗಣಿವೆಯಲ್ಲಿ ಮೇ 5ರಿಂದ ನಡೆದ ಘಟನೆಗಳನ್ನು ಉಲ್ಲೇಖಿಸಿವೆ.  

ಪೂರ್ವ ಲಡಾಕ್‌ನ ಗಡಿಯಲ್ಲಿ ಚೀನಾ ಕಡೆಯಿಂದ ಉದ್ಭವಿಸಿರುವ ಏಕಮುಖ ಘರ್ಷಣೆ ಇನ್ನೂ ಸೂಕ್ಷ್ಮವಾಗಿಯೇ ಮುಂದುವರಿದಿದ್ದು, ಪರಿಸ್ಥಿತಿಯ ಸೂಕ್ತ ಮೌಲ್ಯಮಾಪನ ಹಾಗೂ ಅದನ್ನು ಆಧರಿಸಿ ಸಂಪೂರ್ಣ ನಿಗಾ ವಹಿಸುವ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 

ಈ ಪರಿಸ್ಥಿತಿ ಸುದೀರ್ಘವಾಗಿರಲಿದೆ ಎಂದು ಸಚಿವಾಲಯದ ಅಧಿಕೃತ ದಾಖಲೆಗಳು ಬಹಿರಂಗಪಡಿಸಿದೆ.ಜೂನ್‌ ತಿಂಗಳಲ್ಲಿ ನಡೆದ ಘಟನೆಗಳನ್ನು ಆಧರಿಸಿದ ಈ ವರದಿಯಲ್ಲಿ, ಮೇ 5ರಿಂದ ವಾಸ್ತವ ಗಡಿ ರೇಖೆ (ಎಲ್‌ಎಸಿ) ಮತ್ತು ವಿಶೇಷವಾಗಿ ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಸೇನೆಯ ದಾಳಿ ನಿರಂತರವಾಗಿ ಹೆಚ್ಚುತ್ತಲೇ ಇದೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.

ಮೇ 17 ಹಾಗೂ 18ರಂದು ಚೀನಾ ಬದಿಯಲ್ಲಿನ ಪ್ರದೇಶಗಳಾದ ಕುಗ್ರಾಂಗ್‌ ನಾಲಾ ಮತ್ತು ಗೋಗ್ರಾ ಪ್ರದೇಶಗಳು ಮತ್ತು ಪ್ಯಾಂಗಾಂಗ್‌ ತ್ಸೋನ ಉತ್ತರ ತಟಗಳಲ್ಲಿ ಸೇನೆ ಅತಿಕ್ರಮಣ ಮಾಡಿದೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.