ಕರ ಸೇವಕರ ತ್ಯಾಗ-ಬಲಿದಾನ ಮರೆತುಬಿಡುವವರು 'ರಾಮ ದ್ರೋಹಿಗಳು'!
ಅಯೋಧ್ಯೆಯಲ್ಲಿ ನಡೆಯುತ್ತಿರುವ ಭೂಮಿ ಪೂಜೆ ಸಮಯದಲ್ಲಿ ಕರ ಸೇವಕರನ್ನು ಮರೆತು ಬಿಡುವವರು ರಾಮ ದ್ರೋಹಿಗಳು ಎಂದು ಶಿವಸೇನೆ ಕಿಡಿಕಾರಿದೆ.

ಮುಂಬಯಿ: ಅಯೋಧ್ಯೆಯಲ್ಲಿ ನಡೆಯುತ್ತಿರುವ ಭೂಮಿ ಪೂಜೆ ಸಮಯದಲ್ಲಿ ಕರ ಸೇವಕರನ್ನು ಮರೆತು ಬಿಡುವವರು ರಾಮ ದ್ರೋಹಿಗಳು ಎಂದು ಶಿವಸೇನೆ ಕಿಡಿಕಾರಿದೆ.
ಅಯೋಧ್ಯೆಯಲ್ಲಿ ಭೂಮಿ ಪೂಜೆ ಇಡೀ ದೇಶಕ್ಕೆ ಮತ್ತು ಎಲ್ಲಾ ಹಿಂದೂಗಳಾದ್ದಾಗಿದೆ.ಮಂದಿರ ನಿರ್ಮಾಣದ ಕ್ರೆಡಿಟ್ ಅನ್ನು ಯಾರೊಬ್ಬರು ಪಡೆಯಬಾರದು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದೆ.
ಭೂಮಿ ಪೂಜೆಯಲ್ಲಿ ವ್ಯಕ್ತಿ ಕೇಂದ್ರಿತ ಮತ್ತು ರಾಜಕೀಯ ಪಕ್ಷ ಕೇಂದ್ರಿತವಾಗಿದೆ ಎಂದು ಹೇಳಿದೆ. ರಾಮ ದೇವಾಲಯವನ್ನು ನಿರ್ಮಿಸುವ ಮಣ್ಣಿನಲ್ಲಿ ಕರ ಸೇವಕರ' ತ್ಯಾಗದ ವಾಸನೆ ಇದೆ, ಕರ ಸೇವಕರ ತ್ಯಾಗವನ್ನು ಮರೆತು ಬಿಡುವವರು ರಾಮ ದ್ರೋಹಿಗಳು ಎಂದು ಶಿವಸೇನೆ ಆರೋಪಿಸಿದೆ.
1992 ರಲ್ಲಿ ಕರ ಸೇವಕರು ಅಯೋಧ್ಯೆಯಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದರು. ಹಾಗೂ ಅದೇ ಜಾಗದಲ್ಲಿ ಪ್ರಾಚೀನ ರಾಮಮಂದಿರ ನಿರ್ಮಿಸುವುದಾಗಿ ಘೋಷಿಸಿದ್ದರು.
ಇನ್ನೂ ಬಾಬ್ರಿ ಮಸೀದಿ ಕೆಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಸೇನೆಗೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಪತ್ರಿಕೆ ತಿಳಿಸಿದೆ.
ಮೋದಿ ಆಡಳಿತಾವಧಿಯಲ್ಲಿ ರಾಮಮಂದಿರ ಕಾನೂನಾತ್ಮಕ ವಿಷಯ ಬಗೆಹರಿದಿದೆ, ಇಲ್ಲದಿದ್ದರೇ ಗಗೊಯಿ ಅವರು ರಾಜ್ಯಸಭಾ ಸದಸ್ಯರಾಗುತ್ತಿರಲಿಲ್ಲ ಎಂದು ಟೀಕಿಸಿದೆ.
ಬುಧವಾರ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದೆ, ಇದಾದ ನಂತರ ರಾಮಮಂದಿರ ಸಂಬಂಧಿತ ಎಲ್ಲಾ ರಾಜಕೀಯಗಳು ಕೊನೆ ಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


