ದೇಶ

ರಾಮಮಂದಿರವು ರಾಮರಾಜ್ಯದ ಆದರ್ಶಗಳನ್ನು ಆಧರಿಸಿ ಆಧುನಿಕ ಭಾರತದ ಸಂಕೇತವಾಗಲಿದೆ: ರಾಷ್ಟ್ರಪತಿ ಕೋವಿಂದ್

ಐತಿಹಾಸಿಕ ರಾಮಮಂದಿರ ದೇಗುಲ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ ಬೆನ್ನಲ್ಲೇ ಅತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.

ರಾಮಮಂದಿರವು ರಾಮರಾಜ್ಯದ ಆದರ್ಶಗಳನ್ನು ಆಧರಿಸಿ ಆಧುನಿಕ ಭಾರತದ ಸಂಕೇತವಾಗಲಿದೆ: ರಾಷ್ಟ್ರಪತಿ ಕೋವಿಂದ್
ರಾಮನಾಥ್ ಕೋವಿಂದ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಐತಿಹಾಸಿಕ ರಾಮಮಂದಿರ ದೇಗುಲ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ ಬೆನ್ನಲ್ಲೇ ಅತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.

ರಾಮಮಂದಿರಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ರಾಮಮಂದಿರ ಭವ್ಯ ದೇಗುಲ ನಿರ್ಮಾಣದ ಉದ್ಘಾಟನೆ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ. ರಾಮಮಂದಿರ ಭವ್ಯ ದೇಗುಲವು ರಾಮರಾಜ್ಯದ ಆದರ್ಶಗಳನ್ನು ಆಧರಿಸಿ ಆಧುನಿಕ ಭಾರತದ ಸಂಕೇತವಾಗಲಿದೆ ಎಂದು ನಾನು ನಂಬುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 

'ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕಿದ್ದಕ್ಕಾಗಿ ಎಲ್ಲರಿಗೂ ಶುಭಾಶಯಗಳು. ಭವ್ಯ ದೇಗುಲ ಕಾನೂನಿನಡಿಯಲ್ಲೇ ನಿರ್ಮಿಸಲಾಗುತ್ತಿರುವುದರಿಂದ, ಇದು ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಜನರ ಉತ್ಸಾಹವನ್ನು ವ್ಯಾಖ್ಯಾನಿಸುತ್ತದೆ. ಇದು ರಾಮರಾಜ್ಯದ ಆದರ್ಶಗಳಿಗೆ ಸಾಕ್ಷಿಯಾಗಲಿದೆ ಮತ್ತು ಆಧುನಿಕ ಭಾರತದ ಸಂಕೇತವಾಗಲಿದೆ ಎಂದು ಕೋವಿಂದ್  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.