ದೇಶ

ಬಿಎಂಡಬ್ಲ್ಯೂ ಕಾರಿನಲ್ಲಿ ಸುತ್ತಾಡುತ್ತಾ ಲಾಕ್ ಡೌನ್ ಉಲ್ಲಂಘನೆಯ ಲೈವ್ ವಿಡಿಯೋ, ಪೊಲೀಸರು ಮಾಡಿದ್ದೇನು?

ಆಗರ್ಭ ಶ್ರೀಮಂತನ ಮಗ, ದುಡ್ಡಿನ ಮದದಲ್ಲಿ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಸುತ್ತಾಡುತ್ತಾ ಲಾಕ್ ಡೌನ್ ಉಲ್ಲಂಘಿಸುತ್ತಿರುವುದನ್ನು ಫೇಸ್ ಬುಕ್ ಲೈವ್ ಮಾಡಿದ್ದು ಇದನ್ನು ಗಮನಿಸಿದ ಪೊಲೀಸರು ನಂತರ ಆತನನ್ನು ಬಂಧಿಸಿ ಕೊಟ್ಟ ಶಿಕ್ಷೆ ನೋಡಿ ನೆಟಿಗರು ಫಿದಾ ಆಗಿದ್ದಾರೆ.

ಬಿಎಂಡಬ್ಲ್ಯೂ ಕಾರಿನಲ್ಲಿ ಸುತ್ತಾಡುತ್ತಾ ಲಾಕ್ ಡೌನ್ ಉಲ್ಲಂಘನೆಯ ಲೈವ್ ವಿಡಿಯೋ, ಪೊಲೀಸರು ಮಾಡಿದ್ದೇನು?
ಆರೋಪಿಯನ್ನು ಬಂಧಿಸಿರುವ ಪೊಲೀಸರು
Published On :

ರಾಯಪುರ: ಆಗರ್ಭ ಶ್ರೀಮಂತನ ಪುತ್ರ, ದುಡ್ಡಿನ ಮದದಲ್ಲಿ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಸುತ್ತಾಡುತ್ತಾ ಲಾಕ್ ಡೌನ್ ಉಲ್ಲಂಘಿಸುತ್ತಿರುವುದನ್ನು ಫೇಸ್ ಬುಕ್ ಲೈವ್ ಮಾಡಿದ್ದು ಇದನ್ನು ಗಮನಿಸಿದ ಪೊಲೀಸರು ನಂತರ ಆತನನ್ನು ಬಂಧಿಸಿ ಕೊಟ್ಟ ಶಿಕ್ಷೆ ನೋಡಿ ನೆಟಿಗರು ಫಿದಾ ಆಗಿದ್ದಾರೆ. 

ಕೊರೋನಾ ಸೋಂಕು ಹರಡಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ವಿಸ್ತರಿಸಿದ್ದು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಶಾಂತಿ ನಗರ ನಿವಾಸಿ ಅಭಿನಯ್ ಸೋನಿ ಎಂಬಾತ ಸೋಮವಾರ ರಾತ್ರಿ ತನ್ನ ಕಾರಿನಲ್ಲಿ ಸುತ್ತಾಡುತ್ತಾ ಲಾಕ್ ಡೌನ್ ಉಲ್ಲಂಘಿಸುತ್ತಿರುವುದನ್ನು ಫೇಸ್ ಬುಕ್ ಲೈವ್ ಮಾಡಿದ್ದ. 

ಇದನ್ನು ಗಮನಿಸಿದ ಪೊಲೀಸರು ಮಾರನೇ ದಿನ ಆತನನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಆತನನ್ನು ಬಂಧಿಸುತ್ತಿರುವ ವಿಡಿಯೋವನ್ನು ಆನತ ಖಾತೆ ಮೂಲಕ ಲೈವ್ ಮಾಡಿಸಿ ಬೇರೆಯವರು ಲಾಕ್ ಡೌನ್ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. 

ಇದೇ ವೇಳೆ ನಿನ್ನೆ ರಾತ್ರಿ ನಾನು ಲಾಕ್ ಡೌನ್ ಅನ್ನು ಉಲ್ಲಂಘಿಸುವ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿದ್ದೆ. ಇಂದು, ನಾನು ಮಂದಿರ್ ಹಸೌದ್ ಪೊಲೀಸ್ ಠಾಣೆಯಲ್ಲಿ ನನ್ನ ಬಂಧನದ ನೇರಪ್ರಸಾರ ನೋಡುತ್ತಿದ್ದೇನೆ "ಎಂದು ಅವರು ತಮ್ಮ ಎಫ್‌ಬಿ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಇದರ ಜೊತೆಗೆ ಜವಾಬ್ದಾರಿಯುತ ಪ್ರಜೆಯಾಗಿ ನಾನು ನನ್ನ ಅಪರಾಧವನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.