ದೇಶ

ಕೊರೋನಾಗೆ ದೇಶದ ಮೊದಲ ರಾಜಕಾರಣಿ ಬಲಿ: ಗುಜರಾತ್ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಕ್ ಸಾವು

ಕೊರೋನಾ ವೈರಸ್​​ನಿಂದ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಸಾವನ್ನಪ್ಪಿದ್ದಾರೆ. ಗುಜರಾತ್​ನ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಖ್ ಕೊರೋನಾ ವೈರಸ್​ ನಿಂದಾಗಿ ಮೃತಪಟ್ಟಿದ್ದಾರೆ.

ಕೊರೋನಾಗೆ ದೇಶದ ಮೊದಲ ರಾಜಕಾರಣಿ ಬಲಿ: ಗುಜರಾತ್ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಕ್ ಸಾವು
ಬದ್ರುದ್ದೀನ್ ಶೇಕ್
Published On :

ಅಹಮದಾಬಾದ್: ಕೊರೋನಾ ವೈರಸ್​​ನಿಂದ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಸಾವನ್ನಪ್ಪಿದ್ದಾರೆ. ಗುಜರಾತ್​ನ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಖ್ ಕೊರೋನಾ ವೈರಸ್​ ನಿಂದಾಗಿ ಮೃತಪಟ್ಟಿದ್ದಾರೆ.

ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವುದರಿಂದ ಅನೇಕ ಜನರು ತಿನ್ನಲು ಆಹಾರವೂ ಇಲ್ಲದೆ ಪರದಾಡುತ್ತಿದ್ದಾರೆ. ಅಂಥವರಿಗೆ ಆಹಾರ ವಿತರಿಸಲು ಹೋಗಿದ್ದ ಬದ್ರುದ್ದೀನ್ ಶೇಖ್ ಅವರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿತ್ತು.

ಈ ಹಿನ್ನೆಲೆಯಲ್ಲಿ ಗುಜರಾತ್​ನ ಅಹಮದಾಬಾದ್​ನಲ್ಲಿರುವ ಎಸ್​ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಬಡವರಿಗೆ ಆಹಾರ ವಿತರಿಸುವಾಗಲೇ ಯಾರಿಂದಲೋ ಬದ್ರುದ್ದೀನ್ ಶೇಖ್​ಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾಗೆ ಬಲಿಯಾದ ಮೊದಲ ರಾಜಕಾರಣಿ ಬದ್ರುದ್ದೀನ್ ಶೇಖ್ ಆಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ ಖಚಿತಪಡಿಸಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.