ದೇಶ

ಪಾಕ್‌ ಕುತಂತ್ರಬುದ್ಧಿ: ಕೊರೋನಾದಿಂದ ಕಂಗೆಟ್ಟಿರುವ ಕಾಶ್ಮೀರಕ್ಕೆ ಮತ್ತೊಂದು ಮರ್ಮಾಘಾತ!

ಕೊರೊನಾವೈರಸ್ ರೋಗಿಗಳನ್ನು ಪಾಕಿಸ್ತಾನ, ಕಾಶ್ಮೀರದೊಳಗೆ ನುಗ್ಗಿಸುತ್ತಿದೆ ಎಂಬ ವರದಿಗಳ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್‍ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕ್‌ ಕುತಂತ್ರಬುದ್ಧಿ: ಕೊರೋನಾದಿಂದ ಕಂಗೆಟ್ಟಿರುವ ಕಾಶ್ಮೀರಕ್ಕೆ ಮತ್ತೊಂದು ಮರ್ಮಾಘಾತ!
ಇಮ್ರಾನ್ ಖಾನ್
Published On :

ಶ್ರೀನಗರ: ಕೊರೊನಾವೈರಸ್ ರೋಗಿಗಳನ್ನು ಪಾಕಿಸ್ತಾನ, ಕಾಶ್ಮೀರದೊಳಗೆ ನುಗ್ಗಿಸುತ್ತಿದೆ ಎಂಬ ವರದಿಗಳ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್‍ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಈ ಹಿಂದೆ ಉಗ್ರರನ್ನು ಕಾಶ್ಮೀರ ಕಣಿವೆಗೆ ನುಗ್ಗಿಸುತ್ತಿತ್ತು. ಆದರೆ ಇದೀಗ ಪಾಕಿಸ್ತಾನ ಕೋವಿಡ್ -19 ರೋಗಿಗಳನ್ನು ಕಣಿವೆಯಲ್ಲಿ ನುಗ್ಗಿಸುತ್ತಿದೆ ಎಂಬ ನಂಬಲರ್ಹ ವರದಿಗಳು ನಮ್ಮಲ್ಲಿವೆ. ಇದು ಆತಂಕಕಾರಿ ಸಂಗತಿಯಾಗಿದೆ ಎಂದು ದಿಲ್ಬಾಗ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆದರೂ, ಗಡಿಯಲ್ಲಿ ಮತ್ತು ಒಳನಾಡಿನಲ್ಲಿ ಯಾವುದೇ ಸಂಭವನೀಯ ದಾಳಿ ಎದುರಿಸಲು ಭದ್ರತಾ ಪಡೆಗಳನ್ನು ಸನ್ನದ್ಧಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಇಂದು ಒಂದೇ ದಿನ 49 ಮಂದಿ ಮೃತಪಟ್ಟಿದ್ದು ಒಟ್ಟಾರೆ ಸಾವಿನ ಸಂಖ್ಯೆ  652ಕ್ಕೇರಿದೆ. ಇನ್ನು 1449 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು ಕೊರೋನಾ ಸೋಂಕಿತರ ಸಂಖ್ಯೆ 20,471ಕ್ಕೇರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.