ಕೋವಿಡ್ -19: ಕೇರಳ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತ
ಕೊರೋನಾ ಅಟ್ಟಹಾಸದಿಂದ ನಲುಗಿರುವ ಕೇರಳ ರಾಜ್ಯ, ಸರ್ಕಾರಿ ಉದ್ಯೋಗಿಗಳ ಒಂದು ತಿಂಗಳ ವೇತನವನ್ನು 5 ಕಂತುಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ.

ತಿರುವನಂತಪುರ: ಕೊರೋನಾ ಅಟ್ಟಹಾಸದಿಂದ ನಲುಗಿರುವ ಕೇರಳ ರಾಜ್ಯ, ಸರ್ಕಾರಿ ಉದ್ಯೋಗಿಗಳ ಒಂದು ತಿಂಗಳ ವೇತನವನ್ನು 5 ಕಂತುಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ.
ಕಡಿತಗೊಳಿಸಿದ ಒಂದು ತಿಂಗಳ ಸಂಬಳವನ್ನು ನಿರ್ದಿಷ್ಟ ಅವಧಿಯ ನಂತರ ಅವರಿಗೆ ಮರುಪಾವತಿ ಮಾಡಲಾಗುತ್ತದೆ. ಎಲ್ಲಾ ವಿಭಾಗದ ಸರ್ಕಾರಿ ನೌಕರರ ಆರು ದಿನಗಳ ವೇತನವನ್ನು ಐದು ತಿಂಗಳಲ್ಲಿ ಕಡಿತಗೊಳಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಸಲ್ಲಿಸಿದೆ.
ವಿವಿಧ ಹಂತಗಳಲ್ಲಿ ಈ ಹಣವನ್ನು ವಾಪಸ್ ನೀಡಲಾಗುವುದು, ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಅನುಮೋದನೆಗೊಳ್ಳಲಿದ್ದು ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


