ಮುಸ್ಲಿಮರು ಮತ್ತು ಅಲ್ಪಸಂಖ್ಯಾತರಿಗೆ ಭಾರತ ಸ್ವರ್ಗ: ಮುಖ್ತರ್ ಅಬ್ಬಾಸ್ ನಖ್ವಿ
ಮುಸ್ಲಿಮರಿಗೆ ಭಾರತ ಸ್ವರ್ಗವಾಗಿದೆ. ಅವರನ್ನು 'ದಾರಿ ತಪ್ಪಿಸಲು' ಪ್ರಯತ್ನಿಸುವವರು ಅವರ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದ್ದಾರೆ.

ನವದೆಹಲಿ: ಮುಸ್ಲಿಮರಿಗೆ ಭಾರತ ಸ್ವರ್ಗವಾಗಿದೆ. ಅವರನ್ನು 'ದಾರಿ ತಪ್ಪಿಸಲು' ಪ್ರಯತ್ನಿಸುವವರು ಅವರ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದ್ದಾರೆ.
ಮುಸ್ಲಿಮರ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಅವರ ವಿರುದ್ಧದ ದಾಳಿಯ ಘಟನೆಗಳನ್ನು ತಡೆಯುವಂತೆ ಒಐಸಿ (ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್) ಭಾರತವನ್ನು ಒತ್ತಾಯಿಸಿದ ನಂತರ ನಖ್ವಿ ಅವರ ಈ ಹೇಳಿಕೆ ಹೊರಬಿದ್ದಿದೆ.
ಒಐಸಿಯ ಈ ಟೀಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ನಖ್ವಿ, ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗಲೆಲ್ಲಾ 130 ಕೋಟಿ ಭಾರತೀಯರ ಹಕ್ಕುಗಳು ಮತ್ತು ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ. ಅವರು ಜನರನ್ನು ಯಾವಾಗಲೂ ಸಮಾನವಾಗಿ ಕಾಣುತ್ತಾರೆ ಎಂದು ಹೇಳಿದರು.
ಅಂತಹ ಆರೋಪಗಳನ್ನು ಮಾಡುವ ಜನರಿಗೆ ಇಲ್ಲಿನ ನೈಜತೆಗಳ ಬಗ್ಗೆ ತಿಳಿದಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಮುಸ್ಲಿಮರು, ಅಲ್ಪಸಂಖ್ಯಾತರು ಇಲ್ಲಿ ಅಭಿವೃದ್ಧಿ ಹೊಂದಿದ್ದಾರೆ. ಶಾಂತಿ ಮತ್ತು ಅಭ್ಯುದಯದ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುವವರು ಅವರಿಗೆ ಒಳ್ಳೆಯದನ್ನು ಮಾಡುತ್ತಿಲ್ಲ . ಅವರು ಭಾರತೀಯ ಮುಸ್ಲಿಮರಿಗೆ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ತಪ್ಪು ಮಾಹಿತಿ ಹರಡುವ ಗುರಿಯನ್ನು ಹೊಂದಿರುವ ಯಾವುದೇ ರೀತಿಯ ನಕಲಿ ಸುದ್ದಿ ಮತ್ತು ಪಿತೂರಿಗಳ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು ಎಂದು ನಖ್ವಿ ತಿಳಿಸಿದರು.
ಜಾತ್ಯತೀತತೆ ಮತ್ತು ಸಾಮರಸ್ಯ" ಒಂದು "ರಾಜಕೀಯ ಫ್ಯಾಷನ್" ಅಲ್ಲ, ಆದರೆ ಭಾರತ ಮತ್ತು ಭಾರತೀಯರಿಗೆ "ಪರಿಪೂರ್ಣ ಉತ್ಸಾಹ" ಎಂದು ಅವರು ಪ್ರತಿಪಾದಿಸಿದರು.
ಒಗ್ಗೂಡುವ ಸಂಸ್ಕೃತಿ ಮತ್ತು ಬದ್ಧತೆಯು ವೈವಿಧ್ಯತೆಯಲ್ಲಿ ಏಕತೆಯೊಂದಿಗೆ ದೇಶವನ್ನು ಒಂದುಗೂಡಿಸಿದೆ ಎಂದು ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


