ದೇಶ

ಕೊರೋನಾ ವೈರಸ್: ಕರ್ನಾಟಕದ 8 ಜಿಲ್ಲೆ ಸೇರಿ ದೇಶಾದ್ಯಂತ 170 ಜಿಲ್ಲೆಗಳು ಹಾಟ್ ಸ್ಪಾಟ್ ಎಂದು ಘೋಷಿಸಿದ ಕೇಂದ್ರ

ಕರ್ನಾಟಕ ರಾಜಧಾನಿ ಬೆಂಗಳೂರು, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲ್ಬುರ್ಗಿ ಸೇರಿದಂತೆ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ 170 ಜಿಲ್ಲೆಗಳನ್ನು ಕೇಂದ್ರ ಸರ್ಕಾರ ರೆಡ್ ಜೋನ್ ಎಂದು ಘೋಷಣೆ ಮಾಡಿದೆ.

ಕೊರೋನಾ ವೈರಸ್: ಕರ್ನಾಟಕದ 8 ಜಿಲ್ಲೆ ಸೇರಿ ದೇಶಾದ್ಯಂತ 170 ಜಿಲ್ಲೆಗಳು ಹಾಟ್ ಸ್ಪಾಟ್ ಎಂದು ಘೋಷಿಸಿದ ಕೇಂದ್ರ
ಬೆಂಗಳೂರಿನ ಸಿಬಿ ಪುರ ವಾರ್ಡ್ ಲಾಕ್ ಡೌನ್
Published On :

ನವದೆಹಲಿ: ಕರ್ನಾಟಕ ರಾಜಧಾನಿ ಬೆಂಗಳೂರು, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲ್ಬುರ್ಗಿ ಸೇರಿದಂತೆ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ 170 ಜಿಲ್ಲೆಗಳನ್ನು ಕೇಂದ್ರ ಸರ್ಕಾರ ರೆಡ್ ಜೋನ್ ಎಂದು ಘೋಷಣೆ ಮಾಡಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಪಟ್ಟಿ ಬಿಡುಗಡೆ ಮಾಡಿದ್ದು, ದೇಶದ 170 ಜಿಲ್ಲೆಗಳನ್ನು ಕೊರೋನಾ ಹಾಟ್ ಸ್ಪಾಟ್ ಎಂದು ಘೋಷಿಸಿದೆ. ಈ ಪೈಕಿ ಕರ್ನಾಟಕ 8 ಜಿಲ್ಲೆಗಳು ಸೇರಿವೆ. ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲ್ಬುರ್ಗಿ,  ಬಾಗಲಕೋಟೆ ಮತ್ತು ಧಾರವಾಡವೂ ರಾಜ್ಯದ ಹಾಟ್​​ಸ್ಪಾಟ್​​ ಕೇಂದ್ರಗಳು ಎಂದು ಗುರುತಿಸಲಾಗಿದೆ.

ಕೊರೋನಾ ವೈರಸ್​​​ ಪ್ರಸರಣ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಜಾರಿಯಲ್ಲಿದ್ದ ಲಾಕ್​​ಡೌನ್​​ ಅನ್ನು ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಮೇ 3ನೇ ತಾರೀಕಿನವರೆಗೂ ವಿಸ್ತರಿಸಲಾಗಿದೆ. ಇದೇ ಸಂದರ್ಭದಲ್ಲೇ ಕೇಂದ್ರ ಸರ್ಕಾರ ದೇಶದಲ್ಲಿ  ಕೊರೋನಾ ವೈರಸ್ ಹೆಚ್ಚಾಗಿರುವ ಜಿಲ್ಲೆಗಳನ್ನು ರೆಡ್ ಝೋನ್ ಗೆ ಸೇರಿಸಿ ಪಟ್ಟಿ ಬಿಡುಗಡೆ ಮಾಡಿದೆ. ಕೊರೋನಾ ಸೋಂಕು ಪ್ರಕರಣಗಳು ಆಧರಿಸಿ ಜಿಲ್ಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಹಾಟ್ ಸ್ಪಾಟ್, ನಾನ್ ಹಾಟ್ ಸ್ಪಾಟ್ ಮತ್ತು ಗ್ರೀನ್ ಎಂದು  ವರ್ಗೀಕರಿಸಲಾಗಿದೆ.

ದೇಶದ ಎಲ್ಲ ಆರೂ ಮೆಟ್ರೋ ನಗರಗಳು ರೆಡ್ ಜೋನ್ ನಲ್ಲಿ
ಇನ್ನು ದೇಶದ ಎಲ್ಲ ಆರು ಪ್ರಮುಖ ಮೆಟ್ರೋ ನಗರಗಳಲ್ಲೂ ಕೊರೋನಾ ಹಾವಳಿ ತೀವ್ರವಾಗಿದ್ದು, ಎಲ್ಲ ನಗರಗಳನ್ನು ರೆಡ್ ಝೋನ್ ಗೆ ಸೇರಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ. ವಾಣಿಜ್ಯ ರಾಜಧಾನಿ ಮುಂಬೈ, ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ, ಸಿಲಿಕಾನ್ ಸಿಟಿ  ಬೆಂಗಳೂರು, ಮುತ್ತಿನ ನಗರಿ ಹೈದರಾಬಾದ್, ತಮಿಳುನಾಡು ರಾಜಧಾನಿ ಚೆನ್ನೈ, ರಾಜಸ್ಥಾನದ ಜೈಪುರ ಮತ್ತು ಆಗ್ರಾ ಸೇರಿದಂತೆ 9 ಜಿಲ್ಲೆಗಳನ್ನು ಕೊರೋನಾ ವೈರಸ್ ರೆಡ್ ಝೋನ್ ಗೆ ಸೇರಿಸಲಾಗಿದೆ. ಇನ್ನು ಮೆಟ್ರೋ ನಗರಗಳು ಮಾತ್ರವಲ್ಲದೇ ದೇಶದ ಕೇಂದ್ರಾಡಳಿತ  ಪ್ರದೇಶಗಳೂ ಸೇರಿದಂತೆ 20 ರಾಜ್ಯಗಳ 170 ಜಿಲ್ಲೆಗಳು ರೆಡ್ ಜೋನ್ ನಲ್ಲಿವೆ.

ಇಷ್ಟಕ್ಕೂ ಏನಿದು ಹಾಟ್​​ಸ್ಪಾಟ್ ಎಂದರೇನು?
ಯಾವುದೇ ಪ್ರದೇಶದಲ್ಲಿ 2 ಅಥವಾ ಹೆಚ್ಚು ಜನ ಕೊರೋನಾ ವೈರಸ್ ಪಾಸಿಟಿವ್ ಎಂದು ಕಂಡುಬಂದರೆ ಆ ಪ್ರದೇಶವನ್ನು ಹಾಟ್​ಸ್ಪಾಟ್ ಎನ್ನಲಾಗುತ್ತದೆ. ಈ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಇಲ್ಲಿನ ಜನರಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ  ಮಾಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಿಶೇಷ ಪರವಾನಗಿ ಇರುವ ಆಂಬ್ಯುಲೆನ್ಸ್ ಗಳು ಮಾತ್ರ ಈ ಪ್ರದೇಶದಲ್ಲಿ ಓಡಾಡುತ್ತವೆ. ಆರೋಗ್ಯ ಕಾರ್ಯಕರ್ತರು ಪ್ರತಿದಿನ ಮನೆಮನೆಗೆ ತೆರಳಿ ತಪಾಸಣೆ, ಸ್ವಚ್ಛತೆಯ ಪರೀಕ್ಷೆ ಮಾಡುತ್ತಾರೆ. ನಿಯಮಿತವಾಗಿ ಇಡೀ ಪ್ರದೇಶವನ್ನು  ರಾಸಾಯನಿಕ ಬಳಸಿ ಸ್ವಚ್ಛ ಮಾಡಲಾಗುತ್ತದೆ. ಇಡೀ ಪ್ರದೇಶದ ಎಲ್ಲಾ ಜನರನ್ನೂ ತಪಾಸಣೆ ಮಾಡಲಾಗುತ್ತದೆ. ಈ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಔಷಧ, ದಿನಸಿ ಕೊಳ್ಳಲೂ ಮನೆಯಿಂದ ಹೊರಬರುವಂತಿಲ್ಲ. ಮಾಧ್ಯಮಗಳಿಗೂ ಏರಿಯಾ ಗಡಿಯಿಂದ ಒಳಗೆ ಪ್ರವೇಶವಿಲ್ಲ. ಇಡೀ  ಪ್ರದೇಶದ ಜನ ಒಳಹೊರಗೆ ಓಡಾಡುವಂತಿಲ್ಲ. 

ರೆಡ್ ಜೋನ್
ಹೆಚ್ಚು ಸಂಖ್ಯೆಯಲ್ಲಿ ಪಾಸಿಟಿವ್ ರೋಗಿಗಳು ಕಂಡುಬರುವುದರ ಜೊತೆಗೆ ಉಳಿದವರಿಗೂ ಹರಡುತ್ತಿರುವ ಪ್ರದೇಶವನ್ನು ರೆಡ್ ಝೋನ್ ಪ್ರದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಜನ ಯಾರೂ ಮನೆಯಿಂದ ಹೊರಬರುವಂತಿಲ್ಲ. ಈ ಪ್ರದೇಶ ಪೂರ್ಣವಾಗಿ ಲಾಕ್ ಡೌನ್ ಆಗಿರುತ್ತದೆ. ಈ  ಪ್ರದೇಶದಿಂದ ಯಾರೂ ಹೊರಹೋಗುವುದು, ಒಳಬರುವುದು ನಿಷಿದ್ಧ. ಅಗತ್ಯ ವಸ್ತುಗಳನ್ನು ಕೊಳ್ಳಲು ಕೂಡಾ ಯಾರೂ ಮನೆಯಿಂದ ಹೊರಬರುವಂತಿಲ್ಲ. ಯಾವ ಅಂಗಡಿ-ಮುಂಗಟ್ಟುಗಳೂ ತೆರೆಯುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆಗಳಿಗೆ ಸರ್ಕಾರವೇ ಸರಬರಾಜು ಮಾಡುತ್ತದೆ.

ಆರೆಂಜ್ ಜೋನ್
ಪಾಸಿಟಿವ್ ಪ್ರಕರಣಗಳಿವೆ, ಆದರೆ ಪರಿಸ್ಥಿತಿ ಹತೋಟಿಯಲ್ಲಿದೆ. ಹೊಸ ಪ್ರಕರಣಗಳು ವರದಿಯಾಗಿಲ್ಲ, ಸೋಂಕು ಹರಡುತ್ತಿಲ್ಲ ಎನ್ನುವಂಥಹ ಪ್ರದೇಶಗಳು ಆರೆಂಜ್ ಝೋನ್ ನಲ್ಲಿ ಬರುತ್ತವೆ. ಇಲ್ಲಿ ಅತ್ಯಗತ್ಯವಾದ ಔಷಧ ಅಂಗಡಿ, ಕ್ಲಿನಿಕ್, ದಿನಸಿ-ತರಕಾರಿ ಅಂಗಡಿಗಳು ಮಾತ್ರ ತೆರೆಯಲು  ಅವಕಾಶವಿರುತ್ತದೆ. ಅತ್ಯವಶ್ಯವಾದ ವಸ್ತುಗಳನ್ನು ಕೊಳ್ಳಲು ಮಾತ್ರ ಜನ ಮನೆಯಿಂದ ಹೊರಬರಬೇಕು. ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರುತ್ತದೆ.

ಗ್ರೀನ್ ಜೋನ್

ಇಡೀ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದಿರುವುದು. ಜನರ ಓಡಾಟಕ್ಕೆ ತಡೆಯಿಲ್ಲ. ಜಿಲ್ಲೆಯ ಒಳಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ನಡೆಯಲು ಅವಕಾಶ. ಆದರೆ ಸಾಮಾಜಿಕ ಅಂತರ- ಮಾಸ್ಕ್ ಧರಿಸುವಿಕೆ ಕಡ್ಡಾಯ. ಜಿಲ್ಲೆಯೊಳಗಿನವರು ಗಡಿ ದಾಟುವಂತಿಲ್ಲ. ಯಾವುದೇ ವ್ಯಕ್ತಿ ಅಥವಾ ವಾಹನ ಜಿಲ್ಲೆಯಿಂದ ಹೊರಗೆ ಅಥವಾ ಬೇರೆ ಕಡೆಯಿಂದ ಜಿಲ್ಲೆಯೊಳಗೆ ಓಡಾಟ ನಿಷಿದ್ಧ.

ಕೊರೋನಾ ವೈರಸ್ ಹಾಟ್ ಸ್ಪಾಟ್ ಜಿಲ್ಲೆಗಳ ಪಟ್ಟಿ ಇಂತಿದೆ

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.