ದೇಶ

ಲಾಕ್'ಡೌನ್ ಎಫೆಕ್ಟ್: ವರ್ಕಿಂಗ್ ಹವರ್ಸ್ 8 ಗಂಟೆ ಬದಲು 12 ಗಂಟೆ ಶಿಫ್ಟ್; ಕೇಂದ್ರ ಚಿಂತನೆ?

ಕೇಂದ್ರ ಸರ್ಕಾರವು ಉದ್ಯೋಗಿಗಳ ಕೆಲಸದ ಅವಧಿಯನ್ನು ನಿತ್ಯದ 8 ಗಂಟೆ ಬದಲು 12 ಗಂಟೆಗೆ ಹೆಚ್ಚಿಸುವ ಸಾಧ್ಯತೆಗಳಿದ್ದು, ಈ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಲಾಕ್'ಡೌನ್ ಎಫೆಕ್ಟ್: ವರ್ಕಿಂಗ್ ಹವರ್ಸ್ 8 ಗಂಟೆ ಬದಲು 12 ಗಂಟೆ ಶಿಫ್ಟ್; ಕೇಂದ್ರ ಚಿಂತನೆ?
ಸಂಗ್ರಹ ಚಿತ್ರ
Published On :

ನವದೆಹಲಿ: ಕೇಂದ್ರ ಸರ್ಕಾರವು ಉದ್ಯೋಗಿಗಳ ಕೆಲಸದ ಅವಧಿಯನ್ನು ನಿತ್ಯದ 8 ಗಂಟೆ ಬದಲು 12 ಗಂಟೆಗೆ ಹೆಚ್ಚಿಸುವ ಸಾಧ್ಯತೆಗಳಿದ್ದು, ಈ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಕೊರೋನಾವ ವೈರಸ್ ಲಾಕ್'ಡೌನ್ ಪರಿಣಾಮ ಇದೀಗ ಸರ್ಕಾರಿ ಹಾಗೂ ಖಾಸಗಿ ವಲಯಗಳ ಕಚೇರಿಗಳು, ಉದ್ದಮೆಗಳು, ಕೆಲಸ ನಿಲ್ಲಿಸಿದ್ದು, ಹೀಗಾಗಿ ಅನೇಕ ಕೆಲಸಗಳು ಹಾಗೆಯೇ ಬಾಕಿ ಉಳಿದಿವೆ. 

ಹೀಗಾಗಿ ಈ ಬಾಕಿ ಕೆಲಸ ಸರಿದೂಗಿಸಿಕೊಳ್ಳಲು ಕೆಲಸದ ಅವಧಿ ಹೆಚ್ಚಿಸುವ ಇರಾದೆ ಸರ್ಕಾರಕ್ಕಿದೆ. ಆ ಕಾರಣಕ್ಕೇ ಕರ್ತವ್ಯದ ಅವಧಿಯನ್ನು ಇನ್ನೂ ನಾಲ್ಕು ತಾಸು ಹೆಚ್ಚಿಸುವ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. 

ಕೆಲಸದ ಅವಧಿ ಹೆಚ್ಚಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಅಂಶ ಸುಗ್ರೀವಾಜ್ಞೆಯಲ್ಲಿರಲಿದೆ ಎಂದು ವರದಿಗಳು ತಿಳಿಸಿವೆ. ಲಾಕ್'ಡೌನ್ ಮುಗಿದ ಬಳಿಕ ಕೆಲಸ ಆರಂಭವಾದರೂ, ಊರಿಗೆ ತೆರಳಿರುವ ಕೆಲಸಗಾರರು ತಕ್ಷಣಕ್ಕೇ ಕರ್ತವ್ಯಕ್ಕೆ ಮರಳುವ ಸಾಧ್ಯತೆಗಳಿಲ್ಲ. ಹೀಗಾಗಿ ಇದ್ದ ನೌಕರರಿಗೇ ಹೆಚ್ಚು ಕೆಲಸ ನೀಡಿ, ಕೊರತೆ ಸರಿದೂಗಿಸಲು ಅವಕಾಶ ನೀಡಬೇಕು ಎಂದು ಈ ಹಿಂದೆ ಉದ್ದಮೆ ರಂಗ ಸರ್ಕಾರಕ್ಕೆ ಕೋರಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.