ದೇಶ

ಕೊರೋನಾವೈರಸ್: ದೇಶದಲ್ಲಿ 11 ಸಾವಿರಕ್ಕೂ ಹೆಚ್ಚು ಬಾಧಿತರು, 400ರ ಗಡಿಯತ್ತ ಸಾವಿನ ಸಂಖ್ಯೆ

ಕೊರೋನಾ ಹಬ್ಬದಂತೆ ತಡೆಯಲು ದೇಶದಾದ್ಯಂತ ಲಾಕ್'ಡೌನ್ ಸೇರಿದಂತೆ ಇನ್ನಿತರೆ ಬಿಗಿ ಕ್ರಮ ಕೈಗೊಂಡ ಹೊರತಾಗಿಯೂ, ಮಂಗಳವಾರ ಒಂದೇ ದಿನ ದೇಶದಾದ್ಯಂತ 1340 ಹೊಸಕೊರೋನಾ ಸೋಂಕು ಪ್ರಕರಣಗಳೂ ದಾಖಲಾಗಿದ್ದು, ಈ ಪೈಕಿ ಸೋಮವಾರ 350ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದ ಮಹಾರಾಷ್ಟ್ರ ರಾಜ್ಯದಲ್ಲಿ ಮಂಗಳವಾರವೂ ಹೊಸದಾಗಿ 359 ಪ್ರಕರಣಗಳು ದಾಖಲಾಗಿವೆ.

ಕೊರೋನಾವೈರಸ್: ದೇಶದಲ್ಲಿ 11 ಸಾವಿರಕ್ಕೂ ಹೆಚ್ಚು ಬಾಧಿತರು, 400ರ ಗಡಿಯತ್ತ ಸಾವಿನ ಸಂಖ್ಯೆ
ಸಂಗ್ರಹ ಚಿತ್ರ
Published On :

ನವದೆಹಲಿ: ಕೊರೋನಾ ಹಬ್ಬದಂತೆ ತಡೆಯಲು ದೇಶದಾದ್ಯಂತ ಲಾಕ್'ಡೌನ್ ಸೇರಿದಂತೆ ಇನ್ನಿತರೆ ಬಿಗಿ ಕ್ರಮ ಕೈಗೊಂಡ ಹೊರತಾಗಿಯೂ, ಮಂಗಳವಾರ ಒಂದೇ ದಿನ ದೇಶದಾದ್ಯಂತ 1340 ಹೊಸಕೊರೋನಾ ಸೋಂಕು ಪ್ರಕರಣಗಳೂ ದಾಖಲಾಗಿದ್ದು, ಈ ಪೈಕಿ ಸೋಮವಾರ 350ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದ ಮಹಾರಾಷ್ಟ್ರ ರಾಜ್ಯದಲ್ಲಿ ಮಂಗಳವಾರವೂ ಹೊಸದಾಗಿ 359 ಪ್ರಕರಣಗಳು ದಾಖಲಾಗಿವೆ. 

ಇದೂವರೆಗೆ ಮಹಾರಾಷ್ಟ್ರ ಮತ್ತು ದೇಶವ್ಯಾಪಿ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸೋಂಕಿರನ ಪ್ರಮಾಣವಾಗಿದೆ. ಮತ್ತೊಂದೆಡೆ ಮಂಗಲವಾರ ಸೋಂಕಿಗೆ ದೇಶದಾದ್ಯಂತ 43 ಜನ ಬಲಿಯಾಗಿದ್ದು ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ 381ಕ್ಕೆ ತಲುಪಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವ್ಯಾಪಿ ಲಾಕ್'ಡೌನ್ ನ್ನು ಮೇ.3ರವರೆಗೆ ವಿಸ್ತರಿಸಿದ ಬೆನ್ನಲ್ಲೇ ಹೊರಬಿದ್ದಿರುವ ಈ ಅಂಕಿಅಶಗಳು ಮುಂದಿನ ದಿನಗಳಲ್ಲ ಸೋಂಕಿನ ಪ್ರಮಾಣ ಮತ್ತಷ್ಟು ಸ್ಫೋಟಗೊಳ್ಳುವ ಭೀತಿ ಎದುರಾಗುವಂತೆ ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಅನ್ವಯ ಸೋಂಕಿತರ ಸಂಖ್ಯೆ 10,815ಕ್ಕೆ ತಲುಪಿದ್ದರೆ, ಪಿಟಿಐ ಸುದ್ದಿಸಂಸ್ಥೆ ದೇಶವ್ಯಾಪಿ ಸೋಂಕಿನ ಪ್ರಮಾಣವನ್ನು 11,312ಕ್ಕೆ ತಲುಪಿದೆ ಎಂದು ಹೇಳಿದೆ. 

ಈ ನಡುವೆ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಮತ್ತಷ್ಟು ವ್ಯಾಪಕಗೊಂಡಿದೆ. ಮಂಗಳವಾರ ಒಂದೇ ದಿನ ರಾಜ್ಯದಲ್ಲಿ 359 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 2684ಕ್ಕೆ ತಲುಪಿದೆ. ಜೊತೆಗೆ ಮಂಗಳವಾರ ರಾಜ್ಯದ ವಿವಿಧೆಡೆ 18 ಜನ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಪ್ರಮಾಣ 178ಕ್ಕೆ ಏರಿಕೆಯಾಗಿದೆ. ಈ ಪೈಕಿ ಮುಂಬೈವೊಂದರಲ್ಲಿಯೇ 112 ಜನ ಸಾವನ್ನಪ್ಪಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.