ಲಾಕ್'ಡೌನ್ ನಿಂದಾಗಿ ಸಾಕಷ್ಟು ಹೇಳಲಾಗದಂತಹ ಸಂಕಷ್ಟಗಳು ಎದುರಾಗಿದ್ದು, 'ಸ್ಮಾರ್ಟ್ ಅಪ್‌ಗ್ರೇಡ್' ಅಗತ್ಯವಿದೆ: ರಾಹುಲ್ ಗಾಂಧಿ
ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟು, ವ್ಯವಹಾರಗಳನ್ನು ಮುಂದುವರೆಸಲು ಸ್ಮಾರ್ಟ್ ಅಪ್'ಗ್ರೇಡ್ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ.

ನವದೆಹಲಿ; ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟು, ವ್ಯವಹಾರಗಳನ್ನು ಮುಂದುವರೆಸಲು ಸ್ಮಾರ್ಟ್ ಅಪ್'ಗ್ರೇಡ್ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ.
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಘೋಷಣೆ ಮಾಡಲಾದ 21 ದಿನಗಳ ಲಾಕ್'ಡೌನ್ ಇಂದಿಗೆ ಅಂತ್ಯಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿಯವರು, ಲಾಕ್'ಡೌನ್'ಗೆ ಸ್ಮಾರ್ಟ್ ಅಪ್'ಗ್ರೇಡ್ ಅಗತ್ಯವಿದೆ. ಕೋವಿಡ್-19 ಹಾಟ್'ಸ್ಪಾಟ್ ಇರುವ ಪ್ರದೇಶಗಳನ್ನು ಐಸೋಲೇಷನ್ ನಲ್ಲಿಟ್ಟು, ಮಾಸ್ ಟೆಸ್ಟಿಂಗ್ ನಡೆಸಬೇಕಿದೆ. ಈ ಮೂಲಕ ವ್ಯವಹಾರಸ್ಥರು ಹಾಗೂ ವ್ಯಾಪಾರಸ್ಥರು ತಮ್ಮ ವ್ಯವಹಾರಗಳನ್ನು ಮುಂದುವರೆಸಲು ಅನುವು ಮಾಡಿಕೊಡಬೇಕು ಎಂದು ಹೇಳಿದ್ದಾರೆ.
21 ದಿನಗಳ ಸುದೀರ್ಘ ಲಾಕ್'ಡೌನ್ ದೇಶದಲ್ಲಿ ಹೇಳಲಾಗದಂತಹ ನೋವಿನ ಪರಿಸ್ಥಿತಿಯನ್ನು ತಂದೊಡ್ಡಿದೆ. ರೈತರು ಹಾಗೂ ವಲಸಿಗರು, ದಿನಗೂಲಿ ಕಾರ್ಮಿಕರು, ವ್ಯವಹಾರಸ್ಥರು ಉದ್ಯಮಿಗಳು ಸಂಕಷ್ಟ ಎದುರಿಸುತ್ತಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


