21 ದಿನಗಳ ಲಾಕ್ ಡೌನ್ ನಾಳೆಗೆ ಮುಕ್ತಾಯ: ಕೇಂದ್ರ ಸಚಿವರು, ಅಧಿಕಾರಿಗಳು ಕರ್ತವ್ಯಕ್ಕೆ ಹಾಜರು
21 ದಿನಗಳ ಕೋವಿಡ್-19 ಲಾಕ್ ಡೌನ್ ನಾಳೆಗೆ ಮುಕ್ತಾಯವಾಗುತ್ತಿದ್ದು, ಅದಕ್ಕೆ ಒಂದು ದಿನ ಮೊದಲು ಕೇಂದ್ರ ಸಚಿವರು, ಸರ್ಕಾರದ ಇಲಾಖೆಗಳ ಜಂಟಿ ಕಾರ್ಯದರ್ಶಿಗಳು ಮತ್ತು ಉನ್ನತ ರ್ಯಾಂಕ್ ಮಟ್ಟದ ಅಧಿಕಾರಿಗಳು ಸೋಮವಾರದಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ನವದೆಹಲಿ: 21 ದಿನಗಳ ಕೋವಿಡ್-19 ಲಾಕ್ ಡೌನ್ ನಾಳೆಗೆ ಮುಕ್ತಾಯವಾಗುತ್ತಿದ್ದು, ಅದಕ್ಕೆ ಒಂದು ದಿನ ಮೊದಲು ಕೇಂದ್ರ ಸಚಿವರು, ಸರ್ಕಾರದ ಪ್ರಮುಖ ಇಲಾಖೆಗಳ ಜಂಟಿ ಕಾರ್ಯದರ್ಶಿಗಳು ಮತ್ತು ಉನ್ನತ ರ್ಯಾಂಕ್ ಮಟ್ಟದ ಅಧಿಕಾರಿಗಳು ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಅಗತ್ಯ ಸೇವೆಗಳ ಇಲಾಖೆಗಳ ಸರ್ಕಾರಿ ನೌಕರರು, ಕೇಂದ್ರ ಸಚಿವರುಗಳು ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪ್ರಧಾನ ಮಂತ್ರಿಗಳು ಕಳೆದ ವಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕೇಂದ್ರದ ಸಚಿವರುಗಳು, ಅಧಿಕಾರಿಗಳು ಇಂದು ಕಚೇರಿಗೆ ಬಂದಿದ್ದು ಕಂಡುಬಂತು. ಕೇಂದ್ರ ಸರ್ಕಾರದ ಪ್ರತಿ ಸಚಿವಾಲಯದ ಅಗತ್ಯ ಸೇವೆಗಳ ಇಲಾಖೆಗಳ ಮೂರನೇ ಒಂದು ಭಾಗದಷ್ಟು ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್ ಡೌನ್ ನ ನಿಯಮಗಳ ಮಿತಿಯ ನಡುವೆ ಇಂದು ಕರ್ತವ್ಯಕ್ಕೆ ಹಾಜರಾಗಿ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂತು.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಮ್ಮ ಅಗತ್ಯ ಸಿಬ್ಬಂದಿಯೊಂದಿಗೆ ಸಂಸತ್ತಿನ ಉತ್ತರ ಬ್ಲಾಕ್ ನಲ್ಲಿರುವ ಕಚೇರಿಗೆ ಆಗಮಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾಗರಿಕ ಸಬಲೀಕರಣ ಸಚಿವ ತಾವರ್ ಚಂದ್ ಗೆಹ್ಲೊಟ್, ಕ್ರೀಡಾ ಸಚಿವ ಕಿರಣ್ ರಿಜಿಜು, ಬುಡಕಟ್ಟು ಇಲಾಖೆ ಸಚಿವ ಅರ್ಜುನ್ ಮುಂಡಾ ಸಹ ಇಂದು ತಮ್ಮ ತಮ್ಮ ಕಚೇರಿಗಳಿಗೆ 19 ದಿನಗಳ ವಿರಾಮದ ಬಳಿಕ ಆಗಮಿಸಿದರು. ಈ ಸಚಿವರುಗಳೆಲ್ಲ ಲಾಕ್ ಡೌನ್ ಘೋಷಣೆಯಾದ ನಂತರ ಇಷ್ಟು ದಿನ ತಮ್ಮ ಕಚೇರಿಗಳಿಂದಲೇ ಕೆಲಸ ಮಾಡುತ್ತಿದ್ದರು.
ಪ್ರಧಾನಿಯವರ ನಿರ್ದೇಶನ ಮೇರೆಗೆ ಎಲ್ಲಾ ಸಚಿವರು ಕೆಲಸ ಆರಂಭಿಸಿದ್ದಾರೆ ಎಂದು ಗೆಹ್ಲೊಟ್ ತಿಳಿಸಿದರು. ಸಂಸತ್ತಿನ ನಾರ್ತ್ ಬ್ಲಾಕ್, ಸೌತ್ ಬ್ಲಾಕ್, ಶಾಸ್ತ್ರಿ ಭವನ್ ಗಳಲ್ಲಿರುವ ತಮ್ಮ ಕಚೇರಿಗಳಿಗೆ ಹೋಗುವ ಮೊದಲು ಸಚಿವರುಗಳು ಮತ್ತು ಸಿಬ್ಬಂದಿ ಥರ್ಮಲ್ ಸ್ಕಾನಿಂಗ್ ಗೊಳಪಟ್ಟಿದ್ದು ಕಂಡುಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


