ದೇಶ

ಕೊರೋನಾ:ಮಾತೃತ್ವ ರಜೆ ತೆಗೆದುಕೊಳ್ಳದೇ 1 ತಿಂಗಳ ಹಸುಗೂಸನ್ನು ಕೈಲಿ ಹಿಡಿದು ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ!

ಕೊರೋನಾದಿಂದ ವಿಧಿಸಲಾಗಿರುವ ಲಾಕ್ ಡೌನ್ ಜನತೆಗೆ ಅದೆಷ್ಟೋ ದಕ್ಷ ಅಧಿಕಾರಿಗಳನ್ನು ವೈದ್ಯರನ್ನು ಪರಿಚಯಿಸುತ್ತಿದೆ.

ಕೊರೋನಾ:ಮಾತೃತ್ವ ರಜೆ ತೆಗೆದುಕೊಳ್ಳದೇ 1 ತಿಂಗಳ ಹಸುಗೂಸನ್ನು ಕೈಲಿ ಹಿಡಿದು ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ!
ಆಂಧ್ರಪ್ರದೇಶದ ಐಎಎಸ್ ಅಧಿಕಾರಿ ಗುಮ್ಮಳ್ಲ ಸೃಜನ
Published On :

ಅಮರಾವತಿ: ಕೊರೋನಾದಿಂದ ವಿಧಿಸಲಾಗಿರುವ ಲಾಕ್ ಡೌನ್ ಜನತೆಗೆ ಅದೆಷ್ಟೋ ದಕ್ಷ ಅಧಿಕಾರಿಗಳನ್ನು ವೈದ್ಯರನ್ನು ಪರಿಚಯಿಸುತ್ತಿದೆ. 

ಕೊರೋನಾ ಟೆಸ್ಟ್ ಕಿಟ್ ನ್ನು ತಯಾರಿಸುವ ಯೋಜನೆ ಪೂರ್ಣಗೊಳಿಸಿ ಮಗುವಿಗೆ ಜನ್ಮ ನೀಡಿದ್ದ ತುಂಬು ಗರ್ಭಿಣಿ ವೈದ್ಯೆ ಬಗ್ಗೆ ನೀವೆಲ್ಲ ಓದಿರುತ್ತೀರಿ. ಈಗ ಸಮಾಜದೆಡೆಗೆ ಅಂಥಹದ್ದೇ ಕಳಕಳಿ, ಬದ್ಧತೆ ಹಿಂದಿರುವ ಐಎಎಸ್ ಅಧಿಕಾರಿಯೊಬ್ಬರು ಮಾತೃತ್ವ ರಜೆಯನ್ನು ತೆಗೆದುಕೊಳ್ಳುವುದಕ್ಕೂ ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 

ಆಂಧ್ರಪ್ರದೇಶದ ಗ್ರೇಟರ್ ವಿಶಾಖ ಮುನ್ಸಿಪಲ್ ಕಮಿಷನರ್ ಆಗಿರುವ ಐಎಎಸ್ ಅಧಿಕಾರಿ ಗುಮ್ಮಳ್ಲ ಸೃಜನ 1 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಆರು ತಿಂಗಳ ಕಾಲ ಮಾತೃತ್ವ ರಜೆ ಪಡೆಯುವ ಎಲ್ಲಾ ಅವಕಾಶವಿದ್ದರೂ ದೇಶದಲ್ಲಿ ಕೊರೋನಾ ಹಾಗೂ ಅದನ್ನು ತಡೆಗಟ್ಟಲು ವಿಧಿಸಲಾಗಿರುವ ಲಾಕ್ ಡೌನ್ ನಿಂದ ಉಂಟಾಗಿರುವ ಪರಿಸ್ಥಿತಿಯ ಕಾರಣದಿಂದ ಆಕೆ ಕೆಲಸಕ್ಕೆ ಹಾಜರಾಗಿದ್ದಾರೆ. 

ವಿಶಾಖ ಮುನ್ಸಿಪಲ್ ಕಮಿಷನರ್ ಹುದ್ದೆಯಲ್ಲಿದ್ದುಕೊಂಡು ದೇಶದಲ್ಲಿ ಸಂಕಷ್ಟದ ಪರಿಸ್ಥಿತಿ ಇರುವಾಗ ರಜೆ ತೆಗೆದುಕೊಂಡು ಮನೆಯಲ್ಲಿರುವುದಕ್ಕೆ ಆಕೆಯ ಮನಸ್ಸು ಒಪ್ಪಲಿಲ್ಲ. ಇದು ಕಾರಣ  ಒಂದು ತಿಂಗಳ ಹಸುಗೂಸನ್ನು ಕೈಲಿ ಹಿಡಿದು ಮತ್ತೊಂದೆಡೆ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿ ಮಾತೃತ್ವ ರಜೆಯನ್ನೂ ಲೆಕ್ಕಿಸದೇ ಕರ್ತವ್ಯಕ್ಕೆ ಹಾಜರಾಗಿರುವ ಐಎಎಸ್ ಅಧಿಕಾರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರತೊಡಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.