ಮುದ್ರಣ ಮಾಧ್ಯಮ ಪುನಶ್ಚೇತನಕ್ಕೆ ಸರ್ಕಾರ ಉತ್ತೇಜನ ಪ್ಯಾಕೇಜ್ ನೀಡಲಿ: ಸರ್ಕಾರಕ್ಕೆ ಐಎನ್ಎಸ್ ಒತ್ತಾಯ
ಕೋವಿಡ್-19 ನಿಂದ ಏಕಾಏಕಿ ಎದುರಾಗಿರುವ ಬಿಕ್ಕಟ್ಟಿನ ಮಧ್ಯೆ ಮುದ್ರಣ ಮಾಧ್ಯಮ ಉದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಬೇಕೆಂದು ಭಾರತೀಯ ಪತ್ರಿಕೆಗಳ ಸೊಸೈಟಿ(ಐಎನ್ಎಸ್)ಒತ್ತಾಯಿಸಿದೆ.

ನವದೆಹಲಿ: ಕೋವಿಡ್-19 ನಿಂದ ಏಕಾಏಕಿ ಎದುರಾಗಿರುವ ಬಿಕ್ಕಟ್ಟಿನ ಮಧ್ಯೆ ಮುದ್ರಣ ಮಾಧ್ಯಮ ಉದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಬೇಕೆಂದು ಭಾರತೀಯ ಪತ್ರಿಕೆಗಳ ಸೊಸೈಟಿ(ಐಎನ್ಎಸ್)ಒತ್ತಾಯಿಸಿದೆ.
ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿರುವ ಸೊಸೈಟಿ, ಮುದ್ರಣ ಮಾಧ್ಯಮದ ಮೇಲೆ ಇರುವ ಶೇಕಡಾ 6ರ ಸುಂಕ ತೆರಿಗೆ, ಮುದ್ರಣ ಸಂಸ್ಥೆಗಳ ಮೇಲಿನ ಎರಡು ವರ್ಷಗಳ ರಜಾ ತೆರಿಗೆ, ಬ್ಯೂರೊ ಆಫ್ ಔಟ್ ರೀಚ್ ಅಂಡ್ ಕಮ್ಯುನಿಕೇಷನ್ ನ ಜಾಹಿರಾತು ದರವನ್ನು ಶೇಕಡಾ 50ರಷ್ಟು ಹೆಚ್ಚಿಸುವುದು ಮತ್ತು ಮುದ್ರಣ ಮಾಧ್ಯಮಗಳ ಬಜೆಟ್ ವೆಚ್ಚವನ್ನು ಶೇಕಡಾ 100ರಷ್ಟು ಹೆಚ್ಚಿಸುವಂತೆ ಕೋರಿದೆ.
ಬಿಒಸಿ ಮತ್ತು ಇತರ ರಾಜ್ಯ ಸರ್ಕಾರಗಳಿಂದ ಜಾಹಿರಾತುಗಳಿಂದ ಬರಬೇಕಾಗಿರುವ ಹಣವನ್ನು ಕೇಂದ್ರ ಸರ್ಕಾರ ಶೀಘ್ರವೇ ಬಿಡುಗಡೆಗೊಳಿಸುವಂತೆ ಕೋರಿದೆ. ಮುದ್ರಣ ಮಾಧ್ಯಮಕ್ಕೆ ತೀವ್ರ ಹೊಡೆತ ಬಿದ್ದಿದ್ದು ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


