ದೇಶ

'ಹತ್ಯಾಚಾರ'; ಸಮಯ ವಿಳಂಬ ಮಾಡದೇ ಗಲ್ಲಿಗೇರಿಸಬೇಕು: ಪ್ರಧಾನಿಗೆ ಕೆಟಿಆರ್ ಮನವಿ

ಮಹಿಳೆಯರ ಮೇಲೆ ಅತ್ಯಾಚಾರ ಗೈದು ಕೊಲೆ ಮಾಡುವವರನ್ನು ವಿಳಂಬ ಮಾಡದೇ ಗಲ್ಲಿಗೇರಿಸುವ ಕಾನೂನು ತರಬೇಕು ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಸಚಿವ ಕೆಟಿ ರಾಮಾರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

'ಹತ್ಯಾಚಾರ'; ಸಮಯ ವಿಳಂಬ ಮಾಡದೇ ಗಲ್ಲಿಗೇರಿಸಬೇಕು: ಪ್ರಧಾನಿಗೆ ಕೆಟಿಆರ್ ಮನವಿ
ಸಂಗ್ರಹ ಚಿತ್ರ
Published On :

ಹೈದರಾಬಾದ್: ಮಹಿಳೆಯರ ಮೇಲೆ ಅತ್ಯಾಚಾರ ಗೈದು ಕೊಲೆ ಮಾಡುವವರನ್ನು ವಿಳಂಬ ಮಾಡದೇ ಗಲ್ಲಿಗೇರಿಸುವ ಕಾನೂನು ತರಬೇಕು ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಸಚಿವ ಕೆಟಿ ರಾಮಾರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕಾರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿರುವ ಕೆಟಿಆರ್, ದೇಶಾದ್ಯಂತ ಭಾರೀ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿರುವ ಶಂಶಾಬಾದ್‌ನ 26 ವರ್ಷದ ಮಹಿಳಾ ಪಶುವೈದ್ಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಘಟನೆಯ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಗೆ ತಿದ್ದುಪಡಿ ತರುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 'ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಇಂತಹ ಘೋರ ಕೃತ್ಯಗಳನ್ನು ನಡೆಸುವವರಿಗೆ ವಿಳಂಬ ಮಾಡದೆ 'ಮರಣದಂಡನೆ' ಶಿಕ್ಷೆ ವಿಧಿಸಬೇಕು. ಮರುಪರಿಶೀಲನೆ ಅರ್ಜಿ ಸಲ್ಲಿಸಲು ಅವರಿಗೆ ಬೇರೆ ಯಾವ ಆಯ್ಕೆಗಳೂ ಇರಬಾರದು ಎಂದು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.  ಅಪರಾಧಿಗಳನ್ನು ಬಂಧಿಸಿರಬಹದು. ಆದರೆ, ಪ್ರಿಯಾಂಕಾ ರೆಡ್ಡಿಯವರ ಕುಟುಂಬಕ್ಕೆ ನ್ಯಾಯ ತಂದು ಕೊಡುವವರು ಯಾರು?  ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರನ್ನು ಸಮಯ ವಿಳಂಬ ಮಾಡದೇ ಗಲ್ಲಿಗೇರಿಸಲು ಕಾನೂನು ಬರಬೇಕು ಕೆಟಿಆರ್ ಆಗ್ರಹಿಸಿದ್ದಾರೆ. 

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.