ದೇಶ

ಗುಜರಾತ್: ಮೂರಂತಸ್ತಿನ ಅಪಾರ್ಟ್ ಮೆಂಟ್ ಕಟ್ಟಡ ಕುಸಿತ, ನಾಲ್ವರು ಸಾವು, ಹಲವರಿಗೆ ಗಾಯ

ಅಪಾರ್ಟ್ ಮೆಂಟ್ ಕಟ್ಟಡ ಕುಸಿದ ಕಾರಣ ನಾಲ್ವರು ಮೃತಪಟ್ಟು ಹಲವರು ಅವಶೇಷಗಳಡಿ ಸಿಕ್ಕಿ ಗಾಯಗೊಂಡಿರುವ ಘಟನೆ ಗುಜರಾತಿನ ಖೇಡಾದಲ್ಲಿ ನಡೆದಿದೆ.

ಗುಜರಾತ್: ಮೂರಂತಸ್ತಿನ ಅಪಾರ್ಟ್ ಮೆಂಟ್ ಕಟ್ಟಡ ಕುಸಿತ, ನಾಲ್ವರು ಸಾವು, ಹಲವರಿಗೆ ಗಾಯ
ಗುಜರಾತ್ ಕಟ್ಟಡ ಕುಸಿತ
Published On :

ಖೇಡಾ(ಗುಜರಾತ್): ಅಪಾರ್ಟ್ ಮೆಂಟ್ ಕಟ್ಟಡ ಕುಸಿದ ಕಾರಣ ನಾಲ್ವರು ಮೃತಪಟ್ಟು ಹಲವರು ಅವಶೇಷಗಳಡಿ ಸಿಕ್ಕಿ ಗಾಯಗೊಂಡಿರುವ ಘಟನೆ ಗುಜರಾತಿನ ಖೇಡಾದಲ್ಲಿ ನಡೆದಿದೆ.

ಖೇಡಾದ ಪ್ರಗತಿನಗರದಲ್ಲಿರುವ ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ಕಟ್ಟ್ಡ ಶುಕ್ರವಾರ ತಡರಾತ್ರಿ ಕುಸಿದಿದೆ.

ಅಪಾರ್ಟ್ ಮೆಂಟ್ ಅನ್ನು ಗುಜರಾತ್ ವಸತಿ ಮಂಡಳಿ ನಿರ್ಮಾಣ ಮಾಡಿತ್ತು. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್) ಜೊತೆಗೆ ನಾಡಿಯಾಡ್, ವಡೋದರಾ, ಆನಂದ್ ಮತ್ತು ಅಹಮದಾಬಾದ್‌ನ ಅಗ್ನಿಶಾಮಕ ಸಿಬ್ಬಂದಿ ತಂಡಗಳು ಸ್ಥಳದಲ್ಲಿದ್ದು ಇದುವರೆಗೆ ಎಂಟು ಜನರನ್ನು ರಕ್ಷಿಸಿದೆ.

ಭಗ್ನಾವಶೇಷಗಳ ಅಡಿಯಲ್ಲಿ ಇನ್ನೂ ಜನರು ಸಿಕ್ಕಿಕೊಂಡಿರುವ ಶಂಕೆ ಇದ್ದು ಸ್ಥಳದಲ್ಲಿ ಆತಂಕ ಮನೆಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.