ಕ್ಷಮಿಸು ಅಮ್ಮ, ನನಗೆ ಯಾವುದೇ ಹುಡುಗಿಯೊಂದಿಗೆ ಸಂಬಂಧವಿಲ್ಲ: ಆತ್ಮಹತ್ಯೆಗೆ ಶರಣಾದ ಯುವಕ
ಪ್ರೀತಿಗೆ ವಿರೋಧಿಸುತ್ತಾರೆ ಅಂತ ಹೆತ್ತ ಪೋಷಕರನ್ನೇ ಹತ್ಯೆ ಮಾಡುವ ಸಮಾಜದಲ್ಲಿ 19 ವರ್ಷದ ಯುವಕ ಅಮ್ಮ ನನ್ನನ್ನು ಕ್ಷಮಿಸು. ನನಗೆ ಯಾವುದೇ ಹುಡುಗಿಯೊಂದಿಗೆ ಸಂಬಂಧವಿಲ್ಲ ಅಂತ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಲಖನೌ: ಪ್ರೀತಿಗೆ ವಿರೋಧಿಸುತ್ತಾರೆ ಅಂತ ಹೆತ್ತ ಪೋಷಕರನ್ನೇ ಹತ್ಯೆ ಮಾಡುವ ಸಮಾಜದಲ್ಲಿ 19 ವರ್ಷದ ಯುವಕ ಅಮ್ಮ ನನ್ನನ್ನು ಕ್ಷಮಿಸು. ನನಗೆ ಯಾವುದೇ ಹುಡುಗಿಯೊಂದಿಗೆ ಸಂಬಂಧವಿಲ್ಲ ಅಂತ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಖನೌದ ಜನಕಿಪುರಂನಲ್ಲಿ 19 ವರ್ಷದ ಭಾನು ಪ್ರತಾಪ್ ಸಿಂಗ್ ಎಂಬಾತ ಅಮ್ಮ ನಾನು ಯಾವುದೇ ಹುಡುಗಿಯನ್ನು ಪ್ರೀತಿಸುತ್ತಿಲ್ಲ. ನೀವು ಕೇಳಿರುವುದು ನಿಜವಲ್ಲ. ನಿಮ್ಮ ಸಂಶಯ ನನ್ನನ್ನು ತುಂಬಾ ನೋವಿಗೆ ದೂಡಿದೆ. ನನ್ನನ್ನು ಕ್ಷಮಿಸು. ನಾನು ಹೋಗುತ್ತಿದ್ದೇನೆ ಎಂದು ಭಾವುಕ ಪತ್ರ ಬರೆದಿಟ್ಟು ಮನೆಯ ರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಗನನ್ನು ಕಳೆದುಕೊಂಡಿರುವ ಭಾನು ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಭಾನು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


